ಡೈಲಿ ವಾರ್ತೆ:JAN/24/2026

ಮತದಾರರ ದಿನಾಚರಣೆಯಲ್ಲಿ ಅತ್ಯುತ್ತಮ ಬಿಎಲ್‌ಒಗಳಿಗೆ ಗೌರವ: ಲಕ್ಷ್ಮೇಶ್ವರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಲಕ್ಷ್ಮೇಶ್ವರ: ಬಿಸಿಎನ್ ಪಿಯು ಕಾಲೇಜ್, ಸವಣೂರು ರೋಡ್, ಲಕ್ಷ್ಮೇಶ್ವರದಲ್ಲಿ ದಿನಾಂಕ 25.01.2026 ರಂದು ಬೆಳಿಗ್ಗೆ 11.30ಕ್ಕೆ ಮತದಾರರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ತಾಲೂಕು ಮಠಕ್ಕೆ ಅತ್ಯುತ್ತಮ ಬಿಎಲ್‌ಒ ಪ್ರಶಸ್ತಿ ಪಡೆದಿರುವ ಎಸ್ಎಸ್ ಉಪ್ಪಿನ (ಶಿಕ್ಷಕರು, ಸಂಕದಾಳ) ಹಾಗೂ ಲಕ್ಷ್ಮೇಶ್ವರ ತಾಲೂಕಿನಿಂದ ಗದಗ ಜಿಲ್ಲಾ ಮಟ್ಟದ ಅತ್ಯುತ್ತಮ ಬಿಎಲ್‌ಒ ಪ್ರಶಸ್ತಿ ಪಡೆದಿರುವ ಎಸ್‌ವಿ ಸೋಗಿ (ಶಿಕ್ಷಕರು, ಕುಂದ್ರಳ್ಳಿ ತಾಂಡ) ಅವರಿಗೆ ಗೌರವಾನ್ವಿತವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿಗಳನ್ನು ನಮೂನಾ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಶ್ರೀ ಧನಂಜಯ ಎಂ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕೃಷ್ಣಪ್ಪ ಧರ್ಮರ ಅವರು ಪ್ರದಾನ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಹವಳದ, ಕಾರ್ಯದರ್ಶಿ ಎಂ.ಎ. ನದಾಫ್, ಖಜಾಂಚಿ ಎಂ.ಡಿ. ವಾರ, ಡಿ.ಎಚ್. ಪಾಟೀಲ್, ಬಸವರಾಜ ಯರಗುಪ್ಪಿ, ಎಂ.ಎಸ್. ಹಿರೇಮಠ, ಶ್ರೀಮತಿ ಎಲ್.ಎನ್. ನಂದೆಣ್ಣವರ ಸೇರಿದಂತೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹರಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಡಿ.ಡಿ. ಲಮಾಣಿ, ಗೀತಾ ಹಳ್ಳ್ಮಾಳ, ಖಜಾಂಚಿ ಬಸವರಾಜ ಯತ್ನಳ್ಳಿ ಮತ್ತು ಇತರರು ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮತದಾರರ ಜಾಗೃತಿ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಶ್ರಮಿಸಿದ ಬಿಎಲ್‌ಒಗಳ ಸೇವೆಯನ್ನು ಗುರುತಿಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.