
ಡೈಲಿ ವಾರ್ತೆ:ಜನವರಿ/28/2026
ಬೋಳಿಯಾರ್ ಗ್ರಾಮಕ್ಕೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ – ಪಕ್ಷ ಸಂಘಟನೆಯಲ್ಲಿ ಬಲವರ್ಧನೆಗೆ ಕರೆ

ಬೋಳಿಯಾರ್, ಜ.27: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಸೋಮವಾರ ಬೋಳಿಯಾರ್ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಪಕ್ಷದ ಸಂಘಟನಾ ಬೆಳವಣಿಗೆ ಕುರಿತು ಚರ್ಚಿಸಿದರು.

ಗ್ರಾಮಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು, ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘಟಿತ ಹೋರಾಟದ ಮೂಲಕ ಪಕ್ಷವನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಿ ಮಾರ್ಗದರ್ಶನ ನೀಡಿದರು.
ಈ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಝಾಹಿದ್ ಮಲಾರ್, ಕ್ಷೇತ್ರ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕ್ಷೇತ್ರ ಸದಸ್ಯ ಬಶೀರ್ ಎಸ್.ಎಂ ಉಪಸ್ಥಿತರಿದ್ದರು.
ಅಲ್ಲದೆ ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಬೋಳಿಯಾರ್, ದೇರಳಕಟ್ಟೆ ಬ್ಲಾಕ್ ಸದಸ್ಯರಾದ ರಹಿಮಾನ್ ಬೋಳಿಯಾರ್ ಮತ್ತು ಅಝೀಝ್ ಬೋಳಿಯಾರ್, ಗ್ರಾಮ ಸಮಿತಿ ಅಧ್ಯಕ್ಷ ಶರ್ವನ್ ಬೋಳಿಯಾರ್, ಕಾರ್ಯದರ್ಶಿ ಕಬೀರ್ ರಂತಡ್ಕ, ಬ್ರಾಂಚ್ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಭೆ ಸಮಾರಂಭವು ಪಕ್ಷದ ಸಂಘಟನೆಗೆ ಹೊಸ ಉತ್ಸಾಹ ತುಂಬಿದಂತಾಯಿತು.