

ಡೈಲಿ ವಾರ್ತೆ: ಫೆ./06/2026
ಆರ್ಟ್ ಆಫ್ ಲಿವಿಂಗ್ ಗೆ ಶಿಕ್ಷಣ ವಿಭಾಗದ ಪ್ರಶಿಕ್ಷಣಾರ್ಥಿಗಳು ಭೇಟಿ: ಶ್ರೀ ಶ್ರೀ ರವಿ ಶಂಕರ್ ಗುರೂಜಿರವರ ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ ಗೆ ಪ್ರಶಿಕ್ಷಣಾರ್ಥಿಗಳ ಭೇಟಿ

ಬೆಂಗಳೂರು: ಫೆ.06: ನಗರದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ ಗೆ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಎಂ.ಎಡ್ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಪ್ರಾಯೋಗಿಕ ಚಟುವಟಿಕೆಯ ಭಾಗವಾಗಿ ದಿನಾಂಕ 05.02.2026 ಗುರುವಾರದಂದು ಭೇಟಿ ನೀಡಿದರು.
ವಿದ್ಯಾರ್ಥಿಗಳು ವೈದಿಕ ಶಿಕ್ಷಣ,ಆಯುರ್ವೇದಿಕ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ಗೋಶಾಲೆ, ನಕ್ಷತ್ರವನ ಮತ್ತು ವಿಷಲಾಕ್ಷಿ ಧ್ಯಾನ ಮಂದಿರ ಮುಂತಾದವುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು
ನಂತರದಲ್ಲಿ ಆರ್ಟ್ ಆಫ್ ಲಿವಿಂಗ್ ಸೆಂಟರ್ ವತಿಯಿಂದ ಶಿಕ್ಷಣ ವಿಭಾಗದ ಪ್ರಶಿಕ್ಷಣಾರ್ಥಿಗಳಿಗೆ ಯೋಗ, ಧ್ಯಾನ, ಮತ್ತು ಸುದರ್ಶನ ಕ್ರಿಯೆಯಂತಹ ಒತ್ತಡ ನಿರ್ವಹಣಾ ಕಾರ್ಯಕ್ರಮಗಳನ್ನು ಆಶ್ರಮದ ಸಿಬ್ಬಂದಿ ತಿಳಿಸಿದರು.
ಈ ಆಶ್ರಮದಲ್ಲಿ ಶಾಂತಿ, ಸತ್ಸಂಗ, ಮತ್ತು ಸಾತ್ವಿಕ್ ಆಹಾರದೊಂದಿಗೆ ಸಮಗ್ರ ಆಧ್ಯಾತ್ಮಿಕ ಅನುಭವವನ್ನು ಪಡೆಯಲಾಯಿತು. ಇದೇ ವೇಳೆ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಂಶೋಧನಾರ್ಥಿಗಳಾದ ಶಶಿಕುಮಾರ್ ಬಿ, ಕವಿತಾ ಕೆ. ಆರ್ ಮತ್ತು ಜಲಜಾಕ್ಷಿ ಬಿ. ಎನ್, ಉಪಸ್ಥಿತರಿದ್ದರು.