

ಡೈಲಿ ವಾರ್ತೆ: ಮಾ./03/2026

ವೇಣೂರು ಹಿದಾಯತುಲ್ ಇಸ್ಲಾಂ ಮದರಸಕ್ಕೆ ಶೇ.100 ಫಲಿತಾಂಶ

ಬೆಳ್ತಂಗಡಿ : ಸುನ್ನಿ ವಿದ್ಯಾಭಾಸ ಬೋರ್ಡ್ ನಡೆಸಿದ 2025 – 26 ನೇ ಸಾಲಿನ 5,7, ಮತ್ತು 10 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ವೇಣೂರು ಮುಹಿಯದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಉತ್ತಮ ಸಾಧನೆಗಳಿಸಿದ್ದಾರೆ.
ಮೂವತ್ತು ವಿದ್ಯಾರ್ಥಿಗಳ ಪೈಕಿ 10ನೇ ತರಗತಿಯ ಮೂರು ವಿದ್ಯಾರ್ಥಿನಿಗಳು ಟಾಪರ್ಸ್ , ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 7ನೇ ತರಗತಿಯ 7 ವಿದ್ಯಾರ್ಥಿಗಳು ಹಾಗೂ 5 ನೇ ತರಗತಿಯ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದು, ಉಳಿದಂತೆ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.