

ಡೈಲಿವಾರ್ತೆ:29/ಮಾರ್ಚ್/2026


ಪಶ್ಚಿಮ ಏಷ್ಯಾದಲ್ಲಿ ಭೀಕರ ಸಂಘರ್ಷ: ಅಮೆರಿಕದ ಮತ್ತೊಂದು ಎಫ್-16 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್.!

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಭೀಕರ ಯುದ್ಧವು 30ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ.
ಇರಾನ್‌ನ ಕ್ರಾಂತಿಕಾರಿ ಪಡೆಯಾದ ಐಆರ್‌ಜಿಸಿ (IRGC), ಅಮೆರಿಕದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿದೆ, ಇದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.
ದಕ್ಷಿಣ ಫರ್ಸ್ ಪ್ರಾಂತ್ಯದಲ್ಲಿ ಅಮೆರಿಕದ ಶಕ್ತಿಶಾಲಿ ಯುದ್ಧವಿಮಾನ ಎಫ್-16 ಅನ್ನು ಇರಾನ್ ಪಡೆಗಳು ಯಶಸ್ವಿಯಾಗಿ ಗುರಿಪಡಿಸಿ ನೆಲಸಮಗೊಳಿಸಿವೆ.
ಅಮೆರಿಕದ ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೆ, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ವಿಶ್ವವಿದ್ಯಾಲಯಗಳ ಮೇಲೆಯೂ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಅಲ್ಲದೆ
ಇರಾನ್‌ಗೆ ಬೆಂಬಲವಾಗಿ ಯೆಮೆನ್‌ನ ಹೌತಿ ಬಂಡುಕೋರರು ಯುದ್ಧಕ್ಕೆ ಧುಮುಕಿದ್ದಾರೆ. ಇಸ್ರೇಲ್‌ನ ಏರ್‌ಡಿಫೆನ್ಸ್ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಹೌತಿಗಳು ಭೀಕರ ದಾಳಿ ನಡೆಸುತ್ತಿದ್ದು, ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಸಾವು-ನೋವಿನಿಂದ ಸ್ಮಶಾನದಂತಾಗಿದೆ.
ವ್ಯಾಪಾರ ಮಾರ್ಗಕ್ಕೆ ಕುತ್ತು: ಯುದ್ಧದ ತೀವ್ರತೆಯಿಂದಾಗಿ ಕೆಂಪು ಸಮುದ್ರದ ಹಾರ್ಮುಜ್ ಜಲಸಂಧಿ, ಮಂಡೆಬ್ ಜಲಸಂಧಿ ಮತ್ತು ಸೂಯೆಜ್ ಕಾಲುವೆಯಂತಹ ಪ್ರಮುಖ ವ್ಯಾಪಾರ ಮಾರ್ಗಗಳು ಬಂದ್ ಆಗುವ ಭೀತಿ ಎದುರಾಗಿದೆ. ಇದು ಅಂತರಾಷ್ಟ್ರೀಯ ಹಡಗು ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಇರಾಕ್‌ನ ಎರ್ಬಿಲ್ ಏರ್‌ಪೋರ್ಟ್ ಮೇಲೂ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಮತ್ತು ಯೆಮೆನ್‌ನಲ್ಲಿ ಹೌತಿ ಪಡೆಗಳು ಒಟ್ಟಾಗಿ ಇಸ್ರೇಲ್ ಮತ್ತು ಮಿತ್ರಪಡೆಗಳ ವಿರುದ್ಧ ಸಮರ ಸಾರಿವೆ.