



ಡೈಲಿವಾರ್ತೆ:16/ಏಪ್ರಿಲ್ /2026

ಆಟವಾಡುತ್ತಿದ್ದ ಎರಡೂವರೆ ವರ್ಷದ ಕಂದಮ್ಮನ ಮೇಲೆ ನಾಗರಹಾವು ದಾಳಿ: ಚಿಕಿತ್ಸೆ ಫಲಕಾರಿಯಾಗದೆ ದಾರುಣ ಅಂತ್ಯ

ಸಾಗರ: ಆಟವಾಡುತ್ತಿದ್ದ ಕಂದಮ್ಮನ ಮೇಲೆ ನಾಗರಹಾವೊಂದು ದಾಳಿ ಮಾಡಿದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಗರದ ಎಸ್.ಎನ್. ನಗರದಲ್ಲಿ ಬುಧವಾರ ನಡೆದಿದೆ.
ಸಾಗರದ ಎಸ್.ಎನ್. ನಗರದ ನಿವಾಸಿ ಗಣೇಶ್ ಎಂಬುವವರ ಪುತ್ರ ಭವಿನ್ (2.5 ವರ್ಷ) ಮೃತಪಟ್ಟ ದುರ್ದೈವಿ.
ರಜೆಯ ಹಿನ್ನೆಲೆಯಲ್ಲಿ ಈ ಕುಟುಂಬವು ಅಜ್ಜಿಯ ಮನೆಗೆ ಬಂದಿತ್ತು. ಬುಧವಾರ ಮಗು ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ, ಹಠಾತ್ತಾಗಿ ಬಂದ ನಾಗರಹಾವು ಮಗುವಿನ ಕೈಗೆ ಕಚ್ಚಿದೆ.
ಹಾವು ಕಚ್ಚಿದ ತಕ್ಷಣ ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಲಭಿಸಿದರೂ ಫಲಕಾರಿಯಾಗದೆ ಮಗು ಸಂಜೆ ವೇಳೆಗೆ ಕೊನೆಯುಸಿರೆಳೆದಿದೆ.