ಡೈಲಿವಾರ್ತೆ: 25/ಜು./2026

ಸ್ಮಶಾನ ಸ್ವಚ್ಛಗೊಳಿಸಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆ: ಲಕ್ಷ್ಮೇಶ್ವರ ಪತ್ರಕರ್ತರ ಸೇವೆಗೆ ಸಾರ್ವಜನಿಕರ ಮೆಚ್ಚುಗೆ

ಲಕ್ಷ್ಮೇಶ್ವರ,ಜು.25: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದವರು ಸ್ಮಶಾನ ಸ್ವಚ್ಚತೆಯೊಂದಿಗೆ ಪತ್ರಿಕಾ ದಿನಾಚರಣೆಯನ್ಮು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ.

ಈ ಮುಂಜಾನೆಯ ಶುಭ ಗಳಿಗೆಯಲ್ಲಿ ಕ.ಕಾ.ನಿ. ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕಣ್ಣ ಡಿ ಸೊರಟೂರ ಕ ಕಾ ನಿ ಪತ್ರಕರ್ತರ ಸಂಘದ ಗದಗ ಜಿಲ್ಲಾ ಸದಸ್ಯರಾದ ಮಲ್ಲಿಕಾರ್ಜುನ ಕಳಸಾಪೂರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಗೌರವಾನ್ವಿತ ಮಾಧ್ಯಮ ಸಹೋದರರು ಸ್ಮಶಾನ ಸ್ವಚ್ಛಗೊಳಿಸಿದ್ದು ಸಾರ್ವಜನಿಕರು ಹಾಗೂ ಸಂಘಟನೆಗಳಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಇಂದು 11 ಗಂಟೆಗೆ ಸರಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರದಲ್ಲಿ ಕಾರ್ಯಕ್ರಮ ನಡೆಯಲಿದ್ದು ನೌಕರರು ಹಾಗೂ ಶಿಕ್ಷಕರು ಭಾಗವಹಿಸಬೇಕೆಂದು ಕ ರಾ ಸ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಎನ್ ಭರಮಗೌಡ್ರ ಶ್ರೀಮತಿ ಎಲ್ ಎನ್ ನಂದೆಣ್ಣವರ ಎಂ ಎಸ್ ಹಿರೇಮಠ ವಿನಂತಿಸಿಕೊಂಡಿದ್ದಾರೆ.