



ಡೈಲಿವಾರ್ತೆ:21ಏಪ್ರಿಲ್ /2026

ಸೂರಿಕುಮೇರು: ನವೀಕೃತ ಬದ್ರಿಯಾ ಜುಮ್ಮಾ ಮಸ್ಜಿದ್ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ

ಬಂಟ್ವಾಳ: ಸೂರಿಕುಮೇರು ನವೀಕೃತ ಬದ್ರಿಯಾ ಜುಮ್ಮಾ ಮಸೀದಿಯ ಉದ್ಘಾಟನಾ ಸಮಾರಂಭ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಎಪ್ರಿಲ್ 25 ಮತ್ತು 26 ರಂದು ನಡೆಯಲಿದೆ.
ಶನಿವಾರ ಮಗ್ರಿಬ್ ಬಳಿಕ ಹಂಝ ಮಿಸ್ಬಾಹಿ ಓಟ್ಟಪದವು ಪ್ರಭಾಷಣ ನಡೆಸಲಿದ್ದು ಆದಿತ್ಯವಾರ ಮಗ್ರಿಬ್ ಬಳಿಕ ನವೀಕೃತ ಮಸೀದಿ ಉದ್ಘಾಟನೆ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಇಬ್ರಾಹಿಂ ಬಾದುಷಾ ತಂಙಳ್ ಬುಖಾರಿ ಅಲ್-ಅಝ್‌ಹರಿ ಆನೆಕಲ್ ನೇತೃತ್ವ ನೀಡಲಿರುವರು,ಉಡುಪಿ ಚಿಕ್ಕಮಗಳೂರು, ಹಾಸನ ಮತ್ತು ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಬದ್ರುದ್ದೀನ್ ಮಾಣಿ ಭಾಗವಹಿಸುವರು.
ಸೂರಿಕುಮೇರು ಮಸೀದಿ ಎಸ್.ಎ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಕಲಂದರ್ ಶಾಫಿ ಮದನಿ ಉದ್ಘಾಟಿಸುವರು, ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ , ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.