ಡೈಲಿವಾರ್ತೆ:25/ಏಪ್ರಿಲ್ /2026

ಪುತ್ತೂರಿನಲ್ಲಿ ಮಂಗಳೂರು ಜ್ಯುವೆಲ್ಸ್ ಶುಭಾರಂಭ

ಪುತ್ತೂರು: ಮಂಗಳೂರು ಜ್ಯುವೆಲ್ಸ್’ನ ಪುತ್ತೂರು ಮಳಿಗೆ ಪುತ್ತೂರು ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಬಿಲ್ಡಿಂಗಿನ ಎರಡನೇ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ದೇವರನ್ನು ನೆನೆಸಿಕೊಂಡು ದೀಪ ಬೆಳಗಿಸಿದ್ದೇನೆ. ಈ ಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದು ಹಾರೈಸಿದರು.

ಈ ಬಾರಿ ಉತ್ತಮ ಆಫರ್ ನೀಡುತ್ತಿದ್ದಾರೆ. ಈಗ ಯಾರ ಸೊಂಟದಲ್ಲೂ ಬೆಳ್ಳಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕಪ್ಪಿನ ಒಂದು ದಾರ ಮಾತ್ರ ಇದೆ. ಹಾಗಾಗಿ ಎಲ್ಲರೂ ಒಮ್ಮೆ ಮಂಗಳೂರು ಜ್ಯುವೆಲ್ಸ್ ಗೆ ಭೇಟಿ ನೀಡಿ. ಇಲ್ಲಿ ನೀಡುವ ಆಫರ್ ಗಳನ್ನು ನಿಮ್ಮದಾಗಿಸಿ, ಚಿನ್ನ – ಬೆಳ್ಳಿಯನ್ನು ತಮ್ಮದಾಗಿಸಿಕೊಳ್ಳಿ ಎಂದ ಅವರು, ಮಂಗಳೂರು ಇದ್ದರೆ ಪುತ್ತೂರು. ಪುತ್ತೂರು ಇದ್ದರೆ ಮಂಗಳೂರು. ಅಷ್ಟರಮಟ್ಟಿಗೆ ಈ ಎರಡು ಪಟ್ಟಣಗಳ ವಾಣಿಜ್ಯ ಚಟುವಟಿಕೆಗಳು ಬೆಳೆಯುತ್ತಿವೆ ಎಂದರು.

ಕನ್ನಡ ಹಾಗೂ ತುಳು ಸಿನಿಮಾ ನಟಿ ನಿರೀಕ್ಷಾ ಶೆಟ್ಟಿ ಮಾತನಾಡಿ, ಬೆಂಗಳೂರಿನಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್’ನ ದೊಡ್ಡ ಶೋರೂಂ ಅನ್ನು ನೋಡ್ತಾ ಇದ್ದೆ. ಒಮ್ಮೆ ಹೋಗಬೇಕು ಎಂಬ ಆಶೆಯೂ ಇತ್ತು. ಹೋದಾಗ ಅಲ್ಲಿನ ಆಭರಣಗಳ ಗುಣಮಟ್ಟ ನಿರಾಶೆ ಮಾಡ್ಲಿಲ್ಲ. ಇದೀಗ ಪುತ್ತೂರಿನಲ್ಲಿಯೂ ಸಂಸ್ಥೆ ಶುಭಾರಂಭಗೊಂಡಿದೆ.

ಈ ಸಂಸ್ಥೆ ಇನ್ನಷ್ಟು ಬೆಳೆಯಬೇಕು ಎಂದು ಹಾರೈಸಿದರು.ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಒಂದೊಳ್ಳೆಯ ಜ್ಯುವೆಲ್ಸ್ ಉದ್ಘಾಟನೆಗೊಂಡಿದೆ. ಪುತ್ತೂರಿನಲ್ಲಿ ಒಂದು ರಸ್ತೆಯಲ್ಲಿ ಚಿನ್ನದ ಜ್ಯುವೆಲ್ಸರ್ಸ್’ಗಳೇ ಇವೆ. ಒಂದೊಮ್ಮೆ ಚಿನ್ನ ಖರೀದಿಗೆ ಪುತ್ತೂರಿನ ಹೆಸರೇ ಇತ್ತು. ಮಂಗಳೂರು ಜ್ಯುವೆಲ್ಸ್ ಈ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.

ಹಳೆಯ ಬಂಗಾರಕ್ಕೆ ಹೆಚ್ಚಿನ ಬೆಲೆ ನೀಡ್ತಾರೆ. ಅಂದರೆ ಕಡಿಮೆ ಲಾಭ ಇಟ್ಟುಕೊಳ್ತಾರೆ ಎಂದರ್ಥ. ಕನಿಷ್ಠ ಲಾಭದಲ್ಲಿ ಗ್ರಾಹಕರಿಗೆ ಗರಿಷ್ಠ ಪ್ರಯೋಜನ ನೀಡ್ತಾ ಇದೆ. ಇಲ್ಲಿ ಖಂಡಿತಾ ಉತ್ತಮ ವ್ಯಾಪಾರ ಆಗ್ತದೆ. ನಿಮ್ಮ ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ಸಂಸ್ಥೆ ಬೆಳೆಯುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಸಂಸ್ಥೆಯ ಎಂ.ಡಿ. ವಿಕ್ರಂ ಆಚಾರ್ಯ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜ್ಯುವೆಲ್ಲರಿ ಬ್ಯುಸಿನೆಸ್ ಮಾಡ್ತಾ ಇದ್ದೇನೆ. ಜ್ಯುವೆಲ್ಲರಿ ಪರ್ಚೇಸ್ ಮಾಡಿ, ಉತ್ತಮ ಹಣವನ್ನು ಗ್ರಾಹಕರಿಗೆ ನೀಡುವ ಆಲೋಚನೆ ಇತ್ತು. ಆದರೆ ಇದೀಗ ಶೋರೂಂ ಅನ್ನು ಆರಂಭಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು.ಲೈಟ್ ವೈಟ್ ಜ್ಯುವೆಲ್ಲರಿಗಳನ್ನು ನಾವು ಹೆಚ್ಚಾಗಿ ತಯಾರು ಮಾಡ್ತೇವೆ. ಇದಕ್ಕೆ ತುಂಬಾ ಪ್ರಾಶಸ್ತ್ಯ ಇದೆ. ಈ ಜ್ಯುವೆಲ್ಲರಿಯನ್ನು ಪುತ್ತೂರಿನಲ್ಲಿ ಇನ್ನೂ ಹೆಚ್ಚಾಗಿ ತಯಾರಿಸುವ ಆಲೋಚನೆ ಇದೆ ಎಂದ ಅವರು, ದಿನನಿತ್ಯ ಹಣವನ್ನು ಇಲ್ಲಿ ಸಂಗ್ರಹಿಸುವ ಹೊಸ ಯೋಜನೆ ನಮ್ಮಲ್ಲಿದೆ. ಅಂದರೆ ಜನರ ಬಳಿಗೆ ಹೋಗಿ ಕಲೆಕ್ಷನ್ ಮಾಡಲಾಗುವುದು. ಹನ್ನೊಂದು ತಿಂಗಳಲ್ಲಿ ಇದನ್ನು ಗ್ರಾಹಕರಿಗೆ ಹಿಂದಿರುಗಿಸುತ್ತೇವೆ. ಡಿಜಿಟಲ್ ಆ್ಯಪ್ ಅನ್ನು ಇಂಟ್ರಡ್ಯೂಸ್ ಮಾಡಿದ್ದೇವೆ. ಈ ರೀತಿಯ ಹಲವು ಯೋಜನೆಗಳು ನಮ್ಮಲ್ಲಿವೆ ಎಂದರು.5 ಗ್ರಾಂ ಜ್ಯುವೆಲ್ಲರಿ ತಗೊಂಡ್ರೆ ಚಿನ್ನದ ನಾಣ್ಯ ನೀಡುತ್ತೇವೆ. ಇದನ್ನು ಕೊಲ್ಲಾಪುರ ದೇವಸ್ಥಾನದಲ್ಲಿ ಪೂಜೆ ಮಾಡಿ ತಂದಿದ್ದೇವೆ. ಈ ನಾಣ್ಯವನ್ನು ಪಡೆದುಕೊಳ್ಳುವ ಗ್ರಾಹಕರಿಗೆ ಒಳ್ಳೆಯದಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಪ್ರಮೀಳಾ ವಿಕ್ರಂ ಆಚಾರ್ಯ ಮಾತನಾಡಿ, ವಿಶ್ವಕರ್ಮರು ತಯಾರಿಸಿದ ಚಿನ್ನವನ್ನು ಸ್ಪರ್ಧಾತ್ಮಕ ದರದಲ್ಲಿ ನೀಡ್ತೇವೆ ಎಂದರು.

ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಹುಲಿಕುಣಿತ ತಂಡದಿಂದ ಸಿಂಹ ವೇಷಗಳ ಝಲಕ್, ಯಕ್ಷಗಾನ ವೇಷಧಾರಿಗಳ ಸ್ವಾಗತ, ಗೊಂಬೆ ಕುಣಿತ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು. ಅತಿಥಿಗಳ ಸ್ವಾಗತದೊಂದಿಗೆ ನಡೆದ ಕಾರ್ಯಕ್ರಮ ಸಂಸ್ಥೆಯ ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಮಂಗಳೂರು ಜ್ಯುವೆಲ್ಸ್ ಪುತ್ತೂರಿನಲ್ಲಿ ಶುಭಾರಂಭಗೊಂಡಿತು.