ಡೈಲಿವಾರ್ತೆ:25/ಏಪ್ರಿಲ್ /2026

ಎಸ್.ಎಸ್.ಎಲ್.ಸಿ. : ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ100 ಫಲಿತಾಂಶ

2025-26ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಒಬ್ಬ ವಿದ್ಯಾರ್ಥಿ ದ್ವಿತೀಯ ಹಾಗೂ ಮೂವರು ತೃತೀಯ ಶ್ರೇಣೆಯಲ್ಲಿ ಉತ್ತೀರ್ಣರಾಗಿರುತ್ತಾರೆ.ಕು. ಜೊಯ್ಲಿನ್ ಕಿಯೋಲ ರೆಬೆಲ್ಲೋ 599 (ಶೇ 95.84) ಅಂಕಗಳನ್ನು ಪಡೆದು ಶಾಲೆಯಲ್ಲಿ ಅಗ್ರ ಸ್ಥಾನವನ್ನು ಪಡೆದಿರುತ್ತಾಳೆ.ವೈಷ್ಣವಿ ಖಾರ್ವಿ 589(ಶೇ 94.24), ಅಮೃತಾ ಎ. ಖಾರ್ವಿ 587 (ಶೇ. 93.92 ) ಜೊಯ್ಲಿನ್ ಮರಿನಾ ಸಿಲ್ವ 584(ಶೇ93.44), ವಿವೇಕ್.ಎಸ್.ಖಾವಿ೯ 583(ಶೇ93.28) ಫಾತಿಮಾ ಮಧಿಹಾ 579(ಶೇ 92.64), ಫಾತಿವುಲ್ ಆಯೆಷಾ 571(ಶೇ91.36), ಯಶ್ ಆರ್. ದೇವರ್ಕರ್ 568 (ಶೇ90.88) ಪ್ರಾರ್ಥನಾ ಎಸ್ ಖಾರ್ವಿ 557(ಶೇ89.12), ಅನನ್ಯಾ 552(ಶೇ88.32) ಮೋಮಿನ್ ಮೊಹಮ್ಮದ್ ಝೆಯಾನ್ 544(ಶೇ87.04), ಸೈಮಾ 533(ಶೇ85.28), ಫ್ಲೇವನ್ ಲೋಬೋ 530(ಶೇ.84.80),ಖಾತಿಜಾತುಲ್ ಅಖ್ಸಾ 529(ಶೇ.84.64) ದಿಶಾ ಪೂಜಾರಿ 528(ಶೇ 84.48), ಸಾನ್ವಿ ಖಾರ್ವಿ 527( ಶೇ84.32)ರಿತಿಕ್ ಸಾರಂಗ 516 ( 82.56%) ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ,ಶಾಲೆಯ ಮುಖ್ಯ ಶಿಕ್ಷಕಿ ಧರ್ಮಭಗಿನಿ ವಿಜಯಾ ಕ್ರಾಸ್ತಾ ಮತ್ತು ಶಿಕ್ಷಕ ವೃಂದದವರು,ಪೋಷಕರು ಅಭಿನಂದನೆಯನ್ನು ಸಲ್ಲಿಸಿದರು .