ಡೈಲಿವಾರ್ತೆ: 02/ಮೇ/2026

ಐಸಿಎಸ್‌ಇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊಹಮ್ಮದ್ ನಜ್ಮಿಗೆ ಭರ್ಜರಿ ಸಾಧನೆ

ಕುಂದಾಪುರ: ಇತ್ತೀಚೆಗೆ ನಡೆದ ಐಸಿಎಸ್‌ಇ (ICSE) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೀ ಸಿದ್ದಿವಿನಾಯಕ ಹಟ್ಟಿಯಂಗಡಿ ಶಾಲೆ ವಿದ್ಯಾರ್ಥಿ ಸಿ.ಹೆಚ್ ಮೊಹಮ್ಮದ್ ನಜ್ಮಿ ಅವರು 90.2% ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.​

ತನ್ನ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ದೃಢ ಸಂಕಲ್ಪದಿಂದ ಈ ಉನ್ನತ ಸಾಧನೆ ಮಾಡಿರುವ ನಜ್ಮಿ, ಶಾಲೆಗೆ ಮತ್ತು ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಇವರ ಈ ಅದ್ಭುತ ಯಶಸ್ಸನ್ನು ಕುಟುಂಬಸ್ಥರು, ಶಿಕ್ಷಕರು ಹಾಗೂ ಹಿತೈಷಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.​