



ಡೈಲಿವಾರ್ತೆ: 02/ಮೇ/2026

SDTU ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆ ರಾಜ್ಯಾದ್ಯಕ್ಷರಾಗಿ ಅಥಾವುಲ್ಲ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸೆಲೀಮ್ ಜಿಕೆ ಆಯ್ಕೆ

ಮೈಸೂರು, ಮೇ.2: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯ ಜನರಲ್ ಕೌನ್ಸಿಲ್ ಸಭೆ ರಾಜ್ಯ ಸಂಚಾಲಕ ಅಥಾವುಲ್ಲಾ ಜೋಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮೈಸೂರಿನ ಕ್ಯೂ ಸ್ಟಾರ್ ಹೋಟೆಲ್ ನಲ್ಲಿ ಶುಕ್ರವಾರ ನಡೆಯಿತುSDTU ರಾಜ್ಯ ಸಂಚಾಲಕ ಅಥಾವುಲ್ಲಾ ಜೋಕಟ್ಟೆ ದ್ವಜಾರೋಹಣ ಗೆಯ್ಯುವ ಮೂಲಕ ಸಭೆಗೆ ಚಾಲನೆ ಗೈದರು,
ಬಳಿಕ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು ಸಭಾ ಕಾರ್ಯಕ್ರಮದಲ್ಲಿ SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ವರದಿ ವಾಚಿಸಿದರು ಬಳಿಕ ಹಾಜರಿದ್ದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ವರದಿಯ ಅನುಮೋದನೆ ಪಡೆಯಲಾಯಿತು ಬಳಿಕ ರಾಜ್ಯ ಅಡ್-ಹಾಕ್ ಸಮಿತಿಯನ್ನು SDTU ರಾಷ್ಟ್ರೀಯ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಯಿತು ಬಳಿಕ 20026-29 ರ ಸಾಲಿಗೆ SDTU ನೂತನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯನ್ನು SDTU ರಾಷ್ಟ್ರೀಯ ಸಮಿತಿ ಸದಸ್ಯ ಮೊಹಮ್ಮದ್ ಅಝತ್ ರವರು ಆಯ್ಕೆಗೊಳಿಸಿದರು.
ನೂತನ SDTU ರಾಜ್ಯಾದಕ್ಷರಾಗಿ ಅಥಾವುಲ್ಲ ಜೋಕಟ್ಟೆ, ಉಪಾಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್, ಪ್ರಧಾನ ಕಾರ್ಯದರ್ಶಿಯಾಗಿ ಸೆಲೀಂ ಜಿಕೆ ಗುರುವಾಯನಕೆರೆ, ಕಾರ್ಯದರ್ಶಿಯಾಗಿ ಸೆಯ್ಯದ್ ಅಲ್ತಾಫ್ ಗುಲ್ಬರ್ಗ, ಸೆಯ್ಯದ್ ಮೂಸ, ಕೋಶಾಧಿಕಾರಿಯಾಗಿ ಉಬೈದ್ ಶೇರೀಫ್ ಸದಸ್ಯರಾಗಿ ಅಬ್ದುಲ್.ಹಮೀದ್ ಸಾಲ್ಮರ, ಅಬೂಬಕರ್ ಮದ್ದ, ಖಾದರ್ ಫರಂಗಿಪೇಟೆ, ಸಮೀವುದ್ದೀನ್, ಹನೀಫ್.ಮೂಳೂರು, ಆನಂದ್ ಮಿತ್ತಬೈಲ್, ಕಾಸಿಮ್ ರಬ್ಬಾನಿ, ಅಮೀನ್ ಸೇಟ್ ರವರನ್ನು ಆಯ್ಕೆಗೊಳಿಸಲಾಯಿತು.
SDTU ರಾಷ್ಟೀಯ ಸಮಿತಿ ಸದಸ್ಯ ಫಾರೂಕು ತಮಿಳ್ ನಾಡು ಈ ಸಂದರ್ಭದಲ್ಲಿ ಮಾತನಾಡಿ ಸೈದ್ಧಾಂತಿಕವಾಗಿ ಕಾರ್ಮಿಕರು ಸಂಘಟಿತರಾಗಿ ಶಕ್ತಿಯಾದರೆ ಕಾರ್ಮಿಕರು ಎದುರಿಸುವ ಸವಾಲುಗಳನ್ನು ಅತಿಜಯಿಸಬಹುದು ಮಾತ್ರವಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಸಂವಿಧಾನದ ಆಶಯಗಳು ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ನ್ಯಾಯವಾದಿ ಕಲಿಮುಲ್ಲಾ ಶೆರೀಫಿ ಬೆಂಗಳೂರು, ದ್ವಿಚಕ್ರ ವಾಹನದ ಮೆಕ್ಯನಿಕಲ್ ಎಸೋಸಿಯೇಷನ್ ಬೆಂಗಳೂರು ಅಧ್ಯಕ್ಷ ರವಿ ಉಪಸ್ಥಿತರಿದ್ದರು SDTU ಬೆಂಗಳೂರು ಜಿಲ್ಲಾ ಕಾರ್ಯ ಕಾರಿಣಿ ಸಮಿತಿಯಿಂದ ರಾಷ್ಟ್ರೀಯ, ರಾಜ್ಯ ಸಮಿತಿಗೆ, ಪತ್ರಕರ್ತರಿಗೆ, ಕೊಡಗು ಜಿಲ್ಲಾ ಸಮಿತಿ ಸದಸ್ಯೆ ಹಸೀನಾರವರನ್ನು ಸನ್ಮಾನಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸೆಲೀಮ್ ಜಿಕೆ ಗುರುವಾಯಾನಕೆರೆ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯ ಅಮೀನ್ ಸೇಠ್ ಮೈಸೂರು ಧನ್ಯವಾದಗೈದರು