ಡೈಲಿವಾರ್ತೆ: 07/ಮೇ/2026

ಜೆಇಇ ಬಿ.ಆರ್ಕ್–ಬಿ.ಪ್ಲಾನಿಂಗ್ ಫಲಿತಾಂಶದಲ್ಲಿ ಕ್ರಿಯೇಟಿವ್ ಕಾಲೇಜಿನ ಸಾಧನೆ: ಕಾರ್ಕಳದ ನಾಗದೇವ್ ದೇಶಕ್ಕೆ ಪ್ರಥಮ

ಕಾರ್ಕಳ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಎರಡನೇ ಅವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದೆ.

ಕಾಲೇಜಿನ ವಿದ್ಯಾರ್ಥಿ ನಾಗದೇವ್ ಎಂ.ಜಿ. ಅವರು ಬಿ.ಪ್ಲಾನಿಂಗ್ ವಿಭಾಗದ ಜನರಲ್ ಇಡಬ್ಲ್ಯುಎಸ್ (EWS) ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಬಿ.ಪ್ಲಾನಿಂಗ್ ವಿಭಾಗದಲ್ಲಿ ನಾಗದೇವ್ ಎಂ.ಜಿ. ಅವರು 99.9762662 ಪರ್ಸೆಂಟೈಲ್ ಗಳಿಸಿದ್ದು, ಸುಕ್ಷಿತ್ ಗಿರೀಶ್ ಗೌಡ 99.7769023, ನಮಿತ್ ಕೃಷ್ಣಮೂರ್ತಿ ಹೆಗಡೆ 99.4570078, ವಿಶ್ವೇಶ್ ಎನ್‌.ಹೆಚ್. 99.3484094, ನಿಶಾಂತ್ ಹೊನ್ನಾವರ್ 99.3164686, ಅನಿರುಧ್ ಉಪಾಧ್ಯಾಯ 98.8948512 ಪರ್ಸೆಂಟೈಲ್ ಪಡೆದು ಸಾಧನೆ ಮೆರೆದಿದ್ದಾರೆ.ಇದಲ್ಲದೆ ಅಭಿರಾಮ್ ಭಟ್ ಜಿ.ಪಿ., ಉಲ್ಲಾಸ್ ವೈ. ಪಾಟೀಲ್, ದಿಶಾಂತ್ ಎಂ., ವೃಷಬ್ ಮಂಜುನಾಥ್ ಬೆನ್ನಿ, ಸಂವಿತ್ ಅಮಿತ್ ಗೋಕರ್ಣ ಹಾಗೂ ನಿನಾದ್ ರಾಜೇಶ್ ನಾಯಕ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು 98ಕ್ಕೂ ಅಧಿಕ ಪರ್ಸೆಂಟೈಲ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬಿ.ಪ್ಲಾನಿಂಗ್ ವಿಭಾಗದಲ್ಲಿ 99 ಪರ್ಸೆಂಟೈಲ್ ಗಿಂತ ಅಧಿಕ 5 ಮಂದಿ, 98 ಪರ್ಸೆಂಟೈಲ್ ಗಿಂತ ಅಧಿಕ 12 ಮಂದಿ, 97 ಪರ್ಸೆಂಟೈಲ್ ಗಿಂತ ಅಧಿಕ 16 ಮಂದಿ ಹಾಗೂ 95 ಪರ್ಸೆಂಟೈಲ್ ಗಿಂತ ಅಧಿಕ 22 ಮಂದಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 90 ಪರ್ಸೆಂಟೈಲ್ ಗಿಂತ ಹೆಚ್ಚು ಅಂಕಗಳನ್ನು 31 ಮಂದಿ ವಿದ್ಯಾರ್ಥಿಗಳು ಪಡೆದಿದ್ದಾರೆ. ಇನ್ನೊಂದೆಡೆ, ಬಿ.ಆರ್ಕ್ ವಿಭಾಗದಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ದಾಖಲಿಸಿದ್ದಾರೆ.

ನಾಗದೇವ್ ಎಂ.ಜಿ. ಅವರು ದೇಶಕ್ಕೆ ಐದನೇ ರ‍್ಯಾಂಕ್ ಪಡೆದು, ಗಣಿತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಗಳಿಸಿ ಒಟ್ಟಾರೆ 99.8894999 ಪರ್ಸೆಂಟೈಲ್ ಗಳಿಸಿದ್ದಾರೆ. ಅನಿರುಧ್ ಉಪಾಧ್ಯಾಯ 98.296243 ಹಾಗೂ ವಿಶ್ವೇಶ್ ಎನ್‌.ಹೆಚ್. 98.1317778 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.ಬಿ.ಆರ್ಕ್ ವಿಭಾಗದಲ್ಲಿ 99 ಪರ್ಸೆಂಟೈಲ್ ಗಿಂತ ಅಧಿಕ ಒಬ್ಬರು, 98 ಪರ್ಸೆಂಟೈಲ್ ಗಿಂತ ಅಧಿಕ ಮೂವರು, 97 ಪರ್ಸೆಂಟೈಲ್ ಗಿಂತ ಅಧಿಕ 11 ಮಂದಿ, 95 ಪರ್ಸೆಂಟೈಲ್ ಗಿಂತ ಅಧಿಕ 20 ಮಂದಿ ಹಾಗೂ 90 ಪರ್ಸೆಂಟೈಲ್ ಗಿಂತ ಅಧಿಕ 40 ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಶ್ರೀ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.