



ಡೈಲಿವಾರ್ತೆ: 09/ಮೇ/2026

ರಿಕ್ಷಾ ಚಾಲಕರ ಕ್ಷೇಮಾಭಿವೃದ್ಧಿಗೆ ನಿಗಮ ಮಂಡಳಿ ರಚಿಸಲು ಕರ್ನಾಟಕ ಸರಕಾರ ಮುಂದಾಗಲಿ-ಎಸ್ಡಿಟಿಯು

ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯು ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕಾರಿಣಿ ಸಮಿತಿಯ ಸಮ್ಮುಖದಲ್ಲಿ ಎಸ್ಡ್ಡಿಟಿಯು ರಾಜ್ಯಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ರವರ ಅಧ್ಯಕ್ಷತೆಯಲ್ಲಿ ಕ್ಯೂ ಸ್ಟಾರ್ ಹೋಟೆಲ್ ನಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು.

ಈ ಸಭೆಯಲ್ಲಿ ಅಸಂಘಟಿತ ಕಾರ್ಮಿಕರ ಮತ್ತು ರಿಕ್ಷಾ ಚಾಲಕರ ಬಗ್ಗೆ ಬಹಳಷ್ಟು ಚರ್ಚೆ ನಡೆಸಿ ರಾಜ್ಯದಲ್ಲಿ ಅಸಂಘಟಿತರಾಗಿ ದೈನಂದಿನ ದುಡಿದು ಬದುಕು ಸಾಗಿಸುವ ರಿಕ್ಷಾ ಚಾಲಕರ ಕ್ಷೇಮಾಭಿವೃದ್ಧಿಗಾಗಿ ಸರಕಾರ ನಿಗಮ ಮಂಡಳಿ ರಚಿಸಬೇಕೆಂದು ಕರ್ನಾಟಕ ಸರ್ಕಾರದೊಂದಿಗೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು. ಹಾಗೆಯೇ
ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗೆ ಕಾನೂನು ಮಾನ್ಯತೆ ನೀಡಿದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಈ ಬಗ್ಗೆ ಶಕ್ತವಾದ ಮತ್ತು ಸಮರ್ಪಕವಾದ ವಾದ ಮಂಡಿಸಿ ಕಾರ್ಪರೇಟ್ ಕಂಪನಿಗಳು ನಡೆಸುವ ವೋಲ, ಊಬರ್, ರೇಪಿಡೋ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ಹೇರಲು ಪ್ರಯತ್ನಿಸಬೇಕು ಮತ್ತು
CNG, ಹಾಗೂ ಗ್ರಹ ಬಳಕೆಯ LPG ಗ್ಯಾಸ್ ಗ್ರಾಹಕರಿಗೆ ಸಮರ್ಪಕವಾಗಿ ವಿತರಣೆಯಾಗುವಂತೆ ಸರಕಾರ ಕ್ರಮ ವಹಿಸಬೇಕು ಹಾಗೆಯೇ
LPG ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ವಿಪರೀತ ಬೆಲೆ ಏರಿಕೆಯಾಗಿದ್ದು ಕಾಲಸಂತೆಯಲ್ಲಿ ಅಕ್ರಮವಾಗಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದನ್ನು ತಡೆಯಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಪ್ರಾರಂಭದಲ್ಲಿ ಮೇ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡು ಸಭಾ ಕಾರ್ಯಕ್ರಮ ನಡೆಸಲಾಯಿತು.ರಾಜ್ಯ ನೂತನ ಪದಾಧಿಕಾರಿಗಳಿಗೆ ಸನ್ಮಾನದೊಂದಿಗೆ ಏಕದಿನ ಕಾರ್ಯಕ್ರಮ ನಡೆಸಲಾಗಿತ್ತು.