ಡೈಲಿವಾರ್ತೆ: 11/ಮೇ/2026

ಒತ್ತಡದಿಂದ ಅಂಕೋಲಾ ತಾಲ್ಲೂಕಿನಲ್ಲಿ ದ್ವೇಷ, ಅಸೂಯೆ, ದಬ್ಬಾಳಿಕೆ ನಡೆಯುತ್ತಿದೆ – ಸಂಸದ ಕಾಗೇರಿ

ಅಂಕೋಲಾ: ನಾಗರಾಜ ನಾಯಕ ರ ಸತ್ಯಾಗ್ರಹಕ್ಕೆ ಬೆಂಬಲವಾಗಿ ತಾಲೂಕಿನ ಜನತೆಯಲ್ಲಿ ಶಾಂತಿ ಸೌಹಾರ್ದತೆ ಪ್ರೀತಿ ವಿಶ್ವಾಸ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಸಂಸದನಾಗಿ ಪ್ರಯತ್ನಿಸುತ್ತೇನೆ. ಗೃಹ ಸಚಿವರೊಂದಿಗೆ ಮಾತನಾಡಿ ರಾಜಕೀಯ ಹಸ್ತಕ್ಷೇಪದ ವಿಷಯ ವನ್ನು ಮನದಟ್ಟು ಮಾಡುತ್ತೇನೆ. ವಿಷಯದ ಗಂಭೀರತೆಯನ್ನು ಮನ ವರಿಕೆ ಮಾಡುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮೇ 6ರಿಂದ ಪಟ್ಟಣದ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆ ಎದುರು ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾ ಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾಗರಾಜ ನಾಯಕರು ರಾಜ್ಯ ದಲ್ಲಿಯೇ ಪರಿಚಿತ ನ್ಯಾಯ ವಾದಿಗಳು. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಅನುಭವ ಹೊಂದಿರುವ ನ್ಯಾಯವಾದಿಯೊಬ್ಬರು ನಾಲ್ಕಾರು ದಿನಗಳಿಂದ ಸತ್ಯಾಗ್ರಹ ಮಾಡುತ್ತಿರುವುದು ಸಮಸ್ಯೆಯ ಗಂಭೀರ ತೆಯನ್ನು ತಿಳಿಸಿಕೊಡುತ್ತದೆ. ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಅಂಕೋಲಾ ತಾಲ್ಲೂಕಿನ ಸಂಪೂರ್ಣ ಸ್ಥಿತಿ ದ್ವೇಷ, ಅಸೂಯೆ, ದಬ್ಬಾ ಳಿಕೆ, ಭ್ರಷ್ಟಾಚಾರದ ಎಲ್ಲವೂ ಕಾಂಗ್ರೆಸ್ ನಾಯಕರ ಒತ್ತಡದಿಂದ ನಿರ್ಮಾಣವಾಗುತ್ತಿದೆ ಎಂದರು.

ವಂದಿಗೆ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ನಾಗರಾಜ ನಾಯಕರು ತೆರಳಿದ್ದು ಅಲ್ಲಿ ಯಾಕೆ ಪ್ರಚೋದ ನಕಾರಿ ಮಾತುಗಳು ಕೇಳಿ ಬಂದವು? ಅವರಿಗಿದ್ದ ಬೆಂಬಲ ಯಾರದ್ದು? ಇವೆಲ್ಲವೂ ಸಹಜ ಪ್ರಶ್ನೆಗಳು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಉಸಿರುಗಟ್ಟುವ ಸ್ಥಿತಿಯಲ್ಲಿವೆ. ಅವು ಒತ್ತಡವನ್ನು ಅನುಭ ವಿಸುತ್ತಿವೆ. ಅಕ್ರಮ ಗಣಿಗಾರಿಕೆ ಮತ್ತು ಇತರೆ ಅಕ್ರಮ ಚಟುವ ಟಿಕೆಗಳು ನಡೆಯುತ್ತಿರುವ ಕುರಿತು ಕೇಳಿ ಬಂದಿದೆ. ರಾಜ್ಯ ಸರ್ಕಾರದ ಕೆಲವು ಸಚಿವರ ಒತ್ತಡದ ಕಾರಣ ದಿಂದ ನಿಷ್ಪಕ್ಷಪಾತವಾದ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ನಮ್ಮ ಜಿಲ್ಲಾಡಳಿತಕ್ಕೆ ಮುಕ್ತವಾಗಿ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಧರಣಿ ನಿರತ ನಾಗರಾಜ ನಾಯಕ, ಕರ್ನಾಟಕ ಪೊಲೀಸ್ ಕೈಪಿಡಿಯ 1059 ಕಂಡಿಕೆಯ ಪ್ರಕಾರ ಹಲವು ಕ್ರಿಮಿನಲ್ ದೂರುಗಳಿದ್ದರೆ ರೌಡಿಶೀಟ್ ತೆರೆಯಬೇಕು. ಆದರೆ ಗ್ರಹ ಸಚಿವರು ಗೋಪಾಲಕೃಷ್ಣ ನಾಯಕ ಕಾರಿನಲ್ಲಿ ಓಡಾಡುತ್ತಾರೆ. ಪೊಲೀಸರು ಒಳ್ಳೆಯವರಾದರೂ ಗೋಪಾಲಕೃಷ್ಣ ನಾಯಕ ನಿಯಂತ್ರಣದಲ್ಲಿದ್ದಾರೆ. ಇದು ಜನರಿಗೆ ಅರ್ಥ ವಾಗಬೇಕು. ನನ್ನ ಮೇಲಿನ ಪ್ರಕರ ಣವನ್ನು ವಕೀಲನಾಗಿ ನಾನು ಬಗೆಹರಿಸಿಕೊಳ್ಳಬಹುದು ಆದರೆ ಜನಸಾಮಾನ್ಯರ ಗತಿ ಏನು? ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥಾಪಕರನ್ನು ಕಡೆಗಣಿಸಿ, ಬೆವರು ಹರಿಸಿ ಕಟ್ಟಿದ ಸಂಸ್ಥೆಯಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಯನ್ನು ನೀಡದೆ ಗೋಪಾಲಕೃಷ್ಣ ನಾಯಕರನ್ನು ಟ್ರಸ್ಟಿಯಾಗಿ ಕಾನೂನು ಬಾಹಿರವಾಗಿ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಶಿಕ್ಷಣ ತಜ್ಞರಾಗಬೇಕೋ? ಇಲ್ಲವೇ ಆರು ಕ್ರಿಮಿನಲ್ ಪ್ರಕರಣ ಗಳಿದ್ದವರು ಆಗಬೇಕೋ? ಎನ್ನು ವುದು ಸಂಬಂಧಿಸಿದ ಇಲಾಖೆ ಯವರು ತಿಳಿದುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ನಾಗರಾಜ ನಾಯಕರು ಜನಸಾಮಾನ್ಯರ ದೃಷ್ಟಿ ಯಿಂದ ಸತ್ಯಾಗ್ರಹ ನಿರತರಾಗಿ ದ್ದಾರೆ. ಆದರೆ ಅವರು ನಮ್ಮೆಲ್ಲ ರಿಗೂ ಬೇಕಾಗಿದ್ದವರು. ಅವರು ಹೀಗೆ ಪ್ರತಿಭಟನೆ ನಿರತರಾ ಗಿರುವುದು ಸರಿಯಲ್ಲ ಹಾಗಾಗಿ ನ್ಯಾಯಾಲಯದಲ್ಲಿ ತಮ್ಮ ಸಾಮ ರ್ಥ್ಯದ ಮೂಲಕ ಆಗಿರುವ ಅನ್ಯಾ ಯವನ್ನು ಸರಿಪಡಿಸಿಕೊಳ್ಳಲು ಸೂಕ್ತ ಕ್ರಮವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ.ಮಾಜಿ ಸದಸ್ಯ ಜಗದೀಶ ಮೊಗಟಾ, ಪ್ರಮುಖರಾದ ನಿತ್ಯಾನಂದ ಗಾಂವಕರ, ಬಿಂದೇಶ ನಾಯಕ, ಉದಯ ನಾಯಕ, ರಾಮಚಂದ್ರ ಹೆಗಡೆ, ಜಯಾ ನಾಯ್ಕ, ನಾರಾಯಣ ಹೆಗಡೆ, ಸಾಯೀಕಿರಣ , ಚಂದ್ರಕಾಂತ ನಾಯ್ಕ ಇತರರಿದ್ದರು.