ಡೈಲಿವಾರ್ತೆ: 05/ಜೂ./2026

ಪಾಂಡವರಕಲ್ಲು : ಸರಕಾರಿ ಶಾಲೆಗೆ 8 ಫ್ಯಾನ್ ಕೊಡುಗೆ ನೀಡಿದ ಸುಧಾಕರ ಶೆಣೈ

ಬಂಟ್ವಾಳ : ಪಾಂಡವರಕಲ್ಲು ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಗೆ ಸುಧಾಕರ್ ಶೆಣೈ ಖಂಡಿಗ ಅವರು ಕೊಡುಗೆಯಾಗಿ ಎಂಟು ಫ್ಯಾನ್ ಗಳನ್ನು ಶುಕ್ರವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಅಗ್ನೆಸ್ ಪ್ರಮಿಲಾ ಲೋಬೊ, ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಜೇಕ್ಯಾರ್, ಸದಸ್ಯರಾದ ಮಾಧವ ಪಟ್ರಾಡಿ, ಲತೀಫ್, ಬಾಬು ಪೂಜಾರಿ ನಿರಾಡಿ, ಹನೀಫ್ ಕೆದಿಲೆ, ಫಾರೂಕ್ ನೀರಾಡಿ, ಪದ್ಮನಾಭ, ನಮಿತಾ ಹಾಗೂ ಮತ್ತಿತರರು ಹಾಜರಿದ್ದರು.