


ಡೈಲಿವಾರ್ತೆ: 12/ಜು./2026


ಪಂಚವರ್ಣದ ಆಸಾಡಿ ಒಡ್ರ್ ಆಮಂತ್ರಣ ಪತ್ರಿಕೆ ಬಿಡುಗಡೆ
ಭಾಷೆ ಮತ್ತು ಬದುಕು ಊರುಕೇರಿಯನ್ನು ಗುರುತಿಸುತ್ತದೆ – ಆನಂದ್ ಸಿ ಕುಂದರ್

ಕೋಟ: ಒಂದು ಭಾಷೆ ಮತ್ತು ಬದುಕು ಊರುಕೇರಿಗಳನ್ನು ಗುರುತಿಸಬಲ್ಲದು ಅದೇ ರೀತಿ ಕುಂದಾಪ್ರ ಜನತೆಯನ್ನು ಭಾಷೆಯ ಜೊತೆ ಬದುಕಿನ ಪರಿ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ ಎಂದು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.
ಶನಿವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಇದೇ ಬರುವ ಅಗಸ್ಟ 9ರಂದು ಮಣೂರು ಪರಿಸರದಲ್ಲಿ ನಡೆಯಲಿರುವ ಆಸಾಡಿ ಒಡ್ರ್ ಊರ್ ಕೇರಿ ಬದ್ಕಿನ ಹಬ್ಬ ಎಂಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಪಂಚವರ್ಣ ಸಂಘಟನೆ ಸಾಮಾಜಿಕ,ಪರಿಸರದ ಜೊತೆಗೆ ಕುಂದಾಪ್ರ ಕನ್ನಡದ ಬಗೆಗಿನ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಆಸಾಡಿ ಒಡ್ರ್ ಕಾರ್ಯಕ್ರಮಕ್ಕೆ ಶುಭಾಶಯಕೋರಿದರು.
ಮುಖ್ಯ ಅಭ್ಯಾಗತರಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ರಷಿರಾಜ್ ಸಾಸ್ತಾನ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ನೇಹಕೂಟದ ವಿಜಯಲಕ್ಷ್ಮೀ ಭಟ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿ,ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿ ವಂದಿಸಿದರು.