ಡೈಲಿ ವಾರ್ತೆ : 01 ಮೇ 2022

ಸಾಲಿಗ್ರಾಮ : ಕನ್ನಡ ಸಾಹಿತ್ಯ ಪರಿಷತ್ , ಬ್ರಹ್ಮಾವರ ತಾಲೂಕು ಘಟಕ, ಮತ್ತು ಗೆಳೆಯರ ಬಳಗ(ರಿ.) ಕಾರ್ಕಡ, ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ
“ ಮನೆಯಂಗಳದಲ್ಲಿ ಸಾಹಿತ್ಯ ಹಾಗೂ ಯಕ್ಷಗಾನ ಸಂಭ್ರಮ”
ಏಪ್ರಿಲ್ 30 ರಂದು ಶನಿವಾರ
ಭೂಮಿಕಾ ಮನೆಯಂಗಳ. ಕಾರ್ಕಡ” ದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆಯ ಕಾ.ಸ. ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಕಲಾ ಸಾಹಿತಿ ಜನಾರ್ದನ ಹಂದೆ ದೀಪ ಪ್ರಜ್ವಲನೆ ಗೈದರು ಘರ್ಷಣೆಯಿಂದಲೇ ದೀಪದ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು. ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ ಸತತ ಸಾಹಿತ್ಯಾರಾಧನೆ ಅಭಿನಂದನೀಯ ಎಂದು ಕಲಾ ಸಾಹಿತಿ ಮಂಗಳೂರಿನ ಜನಾರ್ದನ ಹಂದೆ ಹೇಳಿದರು.

ಸಮಾರಂಭದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾದ
ಕೆ. ತಾರನಾಥ ಹೊಳ್ಳ, ಬ್ರಹ್ಮಾವರ ತಾಲೂಕಿನ ಕಾ. ಸ. ಪ. ಅಧ್ಯಕ್ಷರಾದ ಜಿ. ರಾಮಚಂದ್ರ ಐತಾಳ, ಕೋಟ ಹೋಬಳಿ ಅಧ್ಯಕ್ಷ ಕೆ. ಅಚ್ಚುತ ಪೂಜಾರಿ, ಹಾಗೂ ಬ್ರಹ್ಮಾವರ ತಾಲೂಕು ಘಟಕ ಕೋಶಾಧಿಕಾರಿ ನಾಗರಾಜ ಅಲ್ತಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾಗವತ ಶ್ರೀ ರಾಘವೇಂದ್ರ ಮಯ್ಯ ದಂಪತಿಗಳನ್ನು ವೇದಿಕೆಯಲ್ಲಿ ಗಣ್ಯರ ಸಂಮು ಸನ್ಮಾನಿಸಲಾಯಿತು.

ಅಚ್ಚುತ ಪೂಜಾರಿ ಸ್ವಾಗತಿಸಿದರು. ಬಳಗದ ಕೆ. ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಧ್ಯಕ್ಷ ಪ್ರಾಸ್ಥಾವಿಕ ಮಾತನಾಡಿದರು. ಬಳಗದ ಕಾರ್ಯದರ್ಶಿ ಕೆ. ಶೀನ ವಂದಿಸಿದರು. ಪ್ರಾರಂಭದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಭಾವಗೀತೆ, ಶೋಭಾನೆ ಹಾಡು, ಕನ್ನಡ ನಾಡು ನುಡಿ ಬಿಂಬಿಸುವ ಹಾಡು ಇತ್ಯದಿ ಜರುಗಿ ಕೊನೆಯಲ್ಲಿ “ ಮಯ್ಯ ಯಕ್ಷಬಳಗ, ಹಾಲಾಡಿ “ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ, “ಪಾಂಚಜನ್ಯ ಹಾಗೂ ಶ್ರೀ ಕೃಷ್ಣ ಪರಂಧಾಮ” ಜನ ಮನ ರಂಜಿಸಿತು.