ಡೈಲಿವಾರ್ತೆ: 12/ಜು./2026

ವೈಬ್ ಫ್ರೆಂಡ್ಸ್ ದ.ಕ ಇದರ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಸೂರ್ಯ ಆಯ್ಕೆ

ಬಂಟ್ವಾಳ : ವೈಬ್ ಫ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಸೂರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶಾಕಿರ್ ಚಕ್ಕಿ ಅಳಕೆಮಜಲು, ಕೋಶಾಧಿಕಾರಿಯಾಗಿ ಎ.ಜಿ.ಟಿ ಅಬ್ದುಲ್ ಗಫೂರ್ ಪಾಟ್ರಕೋಡಿ ಆಯ್ಕೆಯಾದರು.

ಮಾಣಿಯ ಅನ್ಫಾಲ್ ರೆಸ್ಟೋರೆಂಟ್ ಸಭಾ ಭವನದಲ್ಲಿ ನಡೆದ ವೈಬ್ ಫ್ರೆಂಡ್ಸ್ ದ.ಕ. ಇದರ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ವೈಬ್ ಫ್ರೆಂಡ್ಸ್ ನ ಮಹಾಸಭೆಯ ಖಾಯಂ ಆಹ್ವಾನಿತ, ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಿದರು, ದ.ಕ. ಜಿಲ್ಲಾ ಐಕ್ಯ ವೇದಿಕೆಯ ಉಪಾಧ್ಯಕ್ಷ ಸಾದಿಕ್ ಉಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ಖಾಯಂ ಆಹ್ವಾನಿತರಾದ ಯು.ಎಸ್. ಉಮ್ಮರ್ . ಸುಲ್ತಾನ್ ನಗರ, ಅಬ್ದುಲ್ ರಝಾಕ್ ಪುತ್ತು ಅಲ್ ಮದೀನಾ, ಅಬ್ದುಲ್ ರಝಾಕ್ ಕಟ್ಟಾ, ಹಕೀಂ ಮೈಕೆ, ಪಿ.ಕೆ.ರಶೀದ್ ಪರ್ಲೊಟ್ಟು, ಪ್ರಮುಖರಾದ ಖಾದರ್ ಕನ್ಝ್ ಕಬಕ, ತನ್ವೀರ್ ಉಳ್ಳಾಲ, ಕಮಾಲ್ ಅಜ್ಜಿನಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಫೈಝಲ್ ನೇರಳಕಟ್ಟೆ, ಅಶ್ರಫ್ ಮೈಕೆ, ಜೊತೆ ಕಾರ್ಯದರ್ಶಿಗಳಾಗಿ ಅಝ್ ನಾಸ್ ಕೋಲ್ಪೆ, ಹಕೀಂ ಬಲ್ನಾಡ್, ಲೆಕ್ಕ ಪರಿಶೋಧಕರಾಗಿ ಹಾರಿಸ್ ಪಿ.ಕೆ, ಯುವ ಸಂಯೋಜಕರಾಗಿ ಶರೀಫ್ ಕಬಕ, ಮಾಧ್ಯಮ ಕಾರ್ಯದರ್ಶಿಯಾಗಿ ಶಾಫಿ ಸೂರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಲೈಮಾನ್ ಅನಂತಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಅಶ್ರಫ್ ಪಾಟ್ರಕೋಡಿ, ಶಬ್ಬೀರ್ ಅಳಕೆಮಜಲು ಆಯ್ಕೆಯಾದರು.

ಮನ್ಸೂರ್ ನೇರಳಕಟ್ಟೆ, ಸಾದಿಕ್ ಪಾಟ್ರಕೋಡಿ, ಹಾರಿಸ್ ಮಿತ್ತೂರು, ರಾಝಿಕ್ ಕೋಲ್ಪೆ, ಮುಹಮ್ಮದ್ ಶಫೀಕ್ (ಅಪ್ಪಿ) ಪರ್ಲೊಟ್ಟು, ಶಾಫಿ ಪಾಟ್ರಕೋಡಿ ಹಾಗೂ ಸಲೀಂ ಪರ್ಲೊಟ್ಟು ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು.

ಇದೇ ವೇಳೆ ಸಮಾಜ ಸೇವಕ ರಿಯಾಝ್ ಉಳ್ಳಾಲ ಅವರನ್ನು ಸನ್ಮಾನಿಸಲಾಯಿತು. ಮಹಾಸಭೆಯ ಖಾಯಂ ಆಹ್ವಾನಿತ ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ಸೂರ್ಯ ವಂದಿಸಿದರು.