


ಡೈಲಿವಾರ್ತೆ: 15/ಜು./2026


ಅಪಘಾತದಲ್ಲಿ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ ಸರ್ಕಾರಿ ನೌಕರರ ನಿಧಿಯಿಂದ ₹1ಕೋಟಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಲಕ್ಷ್ಮೇಶ್ವರ: ಕಳೆದ ತಿಂಗಳು ಅಪಘಾತದಲ್ಲಿ ಸಾವನ್ನಪ್ಪಿದ ಶಿಕ್ಷಕ ಅಶೋಕ ಬ. ಸರವಿ ಕುಟುಂಬಕ್ಕೆ ಸರ್ಕಾರಿ ನೌಕರರ ನಿಧಿಯಿಂದ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಜುಲೈ 13 ರಂದು ಸೋಮವಾರ ಪ್ರಸ್ತಾವನೆಯನ್ನು SBI ಬ್ಯಾಂಕಿನ ವ್ಯವಸ್ಥಾಪಕರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲ್ಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಗುರುರಾಜ. ಹವಳದ, ಖಜಾಂಚಿ ಎಂ.ಡಿ. ವಾರದ, ಹಾಗೂ ಮೃತ ಶಿಕ್ಷಕರ ಪತ್ನಿ ಶ್ರೀಮತಿ ಅನಿತಾ ಬ. ಸರವಿ, ಶಿಕ್ಷಕಿ ನಿಂಗಮ್ಮ, ಮೃತರ ಸಹೋದರ ಮಂಜುನಾಥ ಬ. ಸರವಿ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.