ಡೈಲಿವಾರ್ತೆ: 20/ಜು./2026

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿ ಬಾಲಕಿಯ ಸಂಬಂಧಿಕನನ್ನು ಬಂಧಿಸಿದ್ದಾರೆ.

ಉಪ್ಪಿನಂಗಡಿ ನಿವಾಸಿ ಶೋಭರಾಜು (28) ಬಂಧಿತ ಆರೋಪಿ.
ಶೋಭರಾಜ್ ವೇಣೂರು ಮೂಲದ ಬಾಲಕಿಯ ಸಂಬಂಧಿಕನಾಗಿದ್ದು ಖಾಸಗಿ ಬಸ್ಸಿನಲ್ಲಿ ಉದ್ಯೋಗ ಮಾಡುತ್ತಿದ್ದ. ಆರೋಪಿ ಶೋಭರಾಜು ವಿರುದ್ಧ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ದಾಖಲಾಗಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತಂಡ ಆರೋಪಿ ಶೋಭರಾಜನನ್ನು ಬಂಧಿಸಿದೆ ಬಾಲಕೀಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಆರೋಪಿಯನ್ನು ಪಡಿಸಿದ ಬಳಿಕ ಮಂಗಳವಾರ ಜೈಲಿಗೆ ಕಳಿಸಲಾಗಿದೆ.