ಡೈಲಿವಾರ್ತೆ: 22/ಜು./2026

ರೋಟರಿ ಕೋಟ ಸಿಟಿ ಪದಪ್ರದಾನ ಕಾರ್ಯಕ್ರಮ

ಕೋಟ: ರೋಟರಿ ಕ್ಲಬ್ ಕೋಟ ಸಿಟಿ ಪದಪ್ರದಾನ ಕಾರ್ಯಕ್ರಮವು ಸಾಸ್ತಾನ ಕೋಸ್ಟಲ್ ಪ್ಯಾರಡೈಸ್ ನಲ್ಲಿ ಜರಗಿತು.

ಕ್ಲಬ್ ನ ಅಧ್ಯಕ್ಷರಾಗಿ ರಾಧಾಕೃಷ್ಣ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ನಾಯರಿ ಹಾಗೂ ವಿವಿಧ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

2028-29ರ ಜಿಲ್ಲಾ ಗವರ್ನರ್ ಆಲೈನ್ ಲೇವಿಸ್ ಪದಪ್ರದಾನ ನೆರವೇರಿಸಿ ಮಾತನಾಡಿ, ರೋಟರಿಯಲ್ಲಿ ಸೇವೆ ಸಲ್ಲಿಸುವುದು ಜೀವನದಲ್ಲಿ ಸಿಗುವ ಉತ್ತಮ ಸಮಾಜಸೇವಾ ಅವಕಾಶವಾಗಿದೆ. ನಾಯಕನಾದವನು ಸಮರ್ಪಣಾ ಮನೋಭಾವದಿಂದ ಸೇವೆಯಲ್ಲಿ ತೊಡಗಿಸಿಕೊಂಡಾಗ ಇಡೀ ತಂಡ ನಿಮ್ಮೊಂದಿಗೆ ಸಮರ್ಪಣೆಭಾವದಿಂದ ಕೆಲಸ ಮಾಡುತ್ತದೆ ಎಂದರು

ಮುಖ್ಯ ಅತಿಥಿ ಸಹಾಯಕ ಗವರ್ನರ್ ಸುಧಾಕರ ಶೆಟ್ಟಿ ನೂತನ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭ ನೂತನ ಸದಸ್ಯರ ಸೇರ್ಪಡೆ, ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ನೆರವೇರಿತು.

ವಲಯ ಪ್ರತಿನಿಧಿ ಜಿ. ತಿಮ್ಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ: ಉದಯ್ ಕುಮಾರ್ ಶೆಟ್ಟಿ. ರೋಟರಿ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಮತ್ತು ದೀಪಾರಾಣಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಉಮೇಶ್ ನಾಯರಿ ವಂದಿಸಿದರು.