


ಡೈಲಿವಾರ್ತೆ:10/ಸೆ./2026

ನೇರಳಕಟ್ಟೆ : ವೈಬ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಛೇರಿ ಉದ್ಘಾಟನೆ

ವೈಬ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭವು ನೇರಳಕಟ್ಟೆ ಸಮೀಪದ ಪರ್ಲೊಟ್ಟುವಿನಲ್ಲಿ ಗುರುವಾರ ನಡೆಯಿತು.

ನೂತನ ಕಛೇರಿಯನ್ನು ಮಹಮೂದಲ್ ಫೈಝಿ
ವಾಲೆಮುಂಡೇವು ಉದ್ಘಾಟಿಸಿದರು.
ಸಯ್ಯಿದ್ ಇಬ್ರಾಹಿಂ ಹಂಝ ಅಲ್ ಹಾದಿ ತಂಙಳ್ ಪಾಟ್ರಕೋಡಿ ದುಹಾ ನೆರವೇರಿಸಿದರು. ವೈಬ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್ ಸೂರ್ಯ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ನ್ಯಾಯವಾದಿ ಪದ್ಮನಾಭ ಪೂಜಾರಿ, ರಮಾನಾಥ ವಿಟ್ಲ, ಶಾಕಿರ್ ಅಳಕೆಮಜಲು ಶುಭ ಹಾರೈಸಿದರು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಅಳಕೆಮಜಲು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹಂಝ ಮದನಿ, ಸೂರ್ಯ ಜುಮಾ ಮಸೀದಿ ಖತೀಬ್ ಯೂನುಸ್ ಸಅದಿ, ಕಬಕ – ವಿದ್ಯಪುರ ಮಸೀದಿ ಖತೀಬ್ ಹನೀಫ್ ಸಖಾಫಿ, ಮೈಕೆ ಮಸೀದಿ ಖತೀಬ್ ಅಬ್ದುಲ್ ಲತೀಫ್ ಅಝ್ಅರಿ, ಕಾರ್ಯಾಡಿ ಮಸೀದಿ ಖತೀಬ್ ಸಲೀಂ
ಸಅದಿ, ಕಲ್ಲಂದಡ್ಕ ಮಸೀದಿ ಖತೀಬ್ ಆಶಿರ್ ಸಅದಿ, ನೇರಳಕಟ್ಟೆ ಮಸೀದಿ ಇಮಾಂ ಮಕ್ಬೂಲ್ ಫೈಝಿ ಅಲ್ ಅಝ್ಅರಿ, ಪಂತಡ್ಕ ಮಸೀದಿ ಇಮಾಂ ಜಾಫರ್ ಸ್ವಾದಿಕ್ ಫೈಝಿ ಅಲ್ ಅರ್ಶದಿ, ಕೊಡಾಜೆ ಮಸೀದಿ ಮುಅಝ್ಝಿನ್ ಹಾರಿಸ್ ಮುಸ್ಲಿಯಾರ್, ಪರ್ಲೊಟ್ಟು ಮಸೀದಿ ಮುಅಝ್ಝಿನ್ ಹಮೀದ್ ಮುಸ್ಲಿಯಾರ್, ಇಸಾಕ್ ಕೌಸರಿ ಪರ್ಲೊಟ್ಟು, ಫಾರೂಕ್ ಹಾಜಿ ಸುಲ್ತಾನ್, ಅಳಕೆಮಜಲು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ @ ಪುತ್ತು ಹಾಜಿ ಮಸ್ಕತ್, ಕೋಲ್ಪೆ ಮಸೀದಿ ಅಧ್ಯಕ್ಷ ಶೇಖಬ್ಬ ಹಾಜಿ, ಮಾಜಿ ಕಾರ್ಯದರ್ಶಿ ನಾಸಿರ್ ಕೋಲ್ಪೆ, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಕಾರ್ಯದರ್ಶಿ ಸಾದಿಕ್ ಅಕ್ಕರೆ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ಸಾಹುಲ್ ಹಮೀದ್ ಪರ್ಲೊಟ್ಟು, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಕಾರ್ಯದರ್ಶಿ ಸಮದ್ ಪರ್ಲೊಟ್ಟು, ಕೊಡಾಜೆ ಐಕ್ಯ ವೇದಿಕೆಯ ಸ್ಥಾಪಕ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ನೇರಳಕಟ್ಟೆ ಸರಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಶೀದ್ ಪರ್ಲೊಟ್ಟು, ಪಾಟ್ರಕೋಡಿ ಸರಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ರಝಾಕ್ ಮೋನು, ಹಾಜಿ ಮೊಹಿದು ಕುಂಞಿ ಬಡಜ, ಎಂ.ಬಿ.ಇಸ್ಮಾಯಿಲ್ ಬಲ್ನಾಡು, ಉಮ್ಮರ್ ಶಾಫಿ ಸುಲ್ತಾನ್ ನಗರ, ಹಕೀಂ ಮೈಕೆ, ಅಬೂಬಕ್ಕರ್ ಕೋಲ್ಪೆ, ಶ್ರೀನಿವಾಸ ಶೆಟ್ಟಿ ಕೊಲ್ಯ, ಅಬ್ದುಲ್ ರಹಿಮಾನ್ ಕುರುಂಬಳ, ಸಿನಾನ್ ಅಳಕೆಮಜಲು, ಸಾಹುಲ್ ಹಮೀದ್ ನಂದಾವರ, ಹಮೀದ್ ಮೌಲಾ ಕಬಕ, ಸಲೀಂ ಮಾಣಿ, ಇರ್ಶಾದ್ ಪಂತಡ್ಕ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ನ ಉಪಾಧ್ಯಕ್ಷರಾದ ಅಶ್ರಫ್ ಮೈಕೆ, ಫೈಝಲ್ ನೇರಳಕಟ್ಟೆ, ಕೋಶಾಧಿಕಾರಿ ಗಫೂರ್ ಎಂ.ಜಿ.ಟಿ., ಸಂಘಟನಾ ಕಾರ್ಯದರ್ಶಿ ಗಳಾದ ಅಶ್ರಫ್ ಪಾಟ್ರಕೋಡಿ, ಶಬ್ಬೀರ್ ಅಳಕೆಮಜಲು, ಕ್ರೀಡಾ ಕಾರ್ಯದರ್ಶಿ ಅಬ್ಬಾಸ್ ಮೈಕೆ, ಯುವ ಸಂಯೋಜಕ ಶರೀಫ್ ಕಬಕ, ಮನ್ಸೂರ್ ನೇರಳಕಟ್ಟೆ, ಶಾಫಿ ಪಾಟ್ರಕೋಡಿ, ಹಾರಿಸ್ ಜನಪ್ರಿಯ ಮೊದಲಾದವರು ಉಪಸ್ಥಿತರಿದ್ದರು.
ವೈಬ್ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶಾಕಿರ್ ಚಕ್ಕಿ ಅಳಕೆಮಜಲು ಸ್ವಾಗತಿಸಿ, ಮಾಧ್ಯಮ ಕಾರ್ಯದರ್ಶಿ ಶಾಫಿ ಸೂರ್ಯ ವಂದಿಸಿದರು. ಹನೀಫ್ ಬಗ್ಗುಮೂಲೆ ಹಾಗೂ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.