


ಡೈಲಿವಾರ್ತೆ:13/ಸೆ./2026

ಸಂತ ಅಂತೋನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಸ್ತಾನ– ನೂತನ ಇಂಟ್ರ್ಯಾಕ್ಟ್ ಕ್ಲಬ್ ಉದ್ಘಾಟನೆ

ಕೋಟ: ಸಂತ ಅಂತೋನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಸ್ತಾನ ಇಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಪ್ರವತಿ೯ತ ನೂತನ ಇಂಟ್ರ್ಯಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ರೋ. ಜಿಲ್ಲೆ. 3182 ವಲಯ 3ರ ಸಹಾಯಕ ಗವರ್ನರ್ ರೊ. ವಿಜಯ ಕುಮಾರ್ ಶೆಟ್ಟಿ ನೆರವೇರಿಸಿ ಮಾತನಾಡಿದ ಅವರು ದೇಶದ ಪ್ರಗತಿಗೆ ಯುವ ಜನಾಂಗದ ಕೊಡುಗೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಇಂಟ್ರ್ಯಾಕ್ಟ್ ಹದಿಹರೆಯದವರಲ್ಲಿ ಮಾನವೀಯ ಮೌಲ್ಯಗಳು, ನಾಯಕತ್ವ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ ಯ ಕುರಿತಂತೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ”
ಎಂದರು.

ಜಿಲ್ಲಾ ಇಂಟ್ರ್ಯಾಕ್ಟ್ ಸಭಾಪತಿ ರೊ ಗಣೇಶ್ ಶೆಟ್ಟಿ ಕೋಟೇಶ್ವರ ಇವರು ಇಂಟ್ರ್ಯಾಕ್ಟ್ ನೂತನ ಅಧ್ಯಕ್ಷ ಅರ್ನಾಲ್ಡ್ ಲೂಯಿಸ್, ಕಾರ್ಯದರ್ಶಿ ಆಧ್ಯ ಎಸ್ ಪೂಜಾರಿ ಹಾಗೂ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು.
ವಲಯ ಪ್ರತಿನಿಧಿ ರೊ ಸೀತಾರಾಮ ಎಸ್, ಇಂಟ್ರ್ಯಾಕ್ಟ್
ಕೋ ಆಡಿ೯ನೇಟರ್ ರೊ ರವಿರಾಜ್ ಕಿದಿಯೂರು,
ರೊ ಲೀಲಾವತಿ ಗಂಗಾಧರ, ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ರೊ ಕುಸುಮಾ ಮನೋಜ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಮಾಗ೯ದಶಿ೯ ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಭಟ್ ಸ್ವಾಗತಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಆಲ್ಮೇಡ ವಂದಿಸಿದರು.
ರೋಟರಿ ಕಾರ್ಯದರ್ಶಿ
ಕೆ. ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು.