ಡೈಲಿವಾರ್ತೆ:19/ಸೆ./2026

ಎಸ್ಕೆಎಸ್ಸೆಸ್ಸೆಫ್ ಪಮ್ಮಲೆ ಯುನಿಟ್‌ ಮಹಾಸಭೆ., ಅಧ್ಯಕ್ಷರಾಗಿ ಅಬ್ದುಲ್ ಕೆರೀಂ ಪಿಲಿಪ್ಪುಡೆ

ಪುತ್ತೂರು : ಎಸ್ಕೆಎಸ್ಸೆಸ್ಸೆಫ್ ಪಮ್ಮಲೆ ಯುನಿಟ್‌ ಇದರ ಮಹಾಸಭೆಯು ಇತ್ತೀಚೆಗೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕೆರೀಂ ಫಿಲಿಪ್ಪುಡೆ ಆಯ್ಕೆಯಾಗಿದ್ದಾರೆ.

ಕೆರೀಂ ಫಿಲಿಪ್ಪುಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯನ್ನು ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಉದ್ಘಾಟಿಸಿದರು. ಪಡುಮಲೆ ಜಮಾಅತ್ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು, ಜಮಾಅತ್ ಕಾರ್ಯದರ್ಶಿ ಆಲಿಕುಂಞ್ಞ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು

ಮಹಮ್ಮದ್ ಹಾಜಿ ಕೆ.ಎಚ್ ಪ್ರಸ್ತಾವನೆಗೈದರು. ಶಾಕಿರ್ ಫೈಝಿ ಸ್ವಾಗತಿಸಿ, ಹಕೀಂ ಫ್ಯೆಝಿ ವಂದಿಸಿದರು.

ಇದೇ ವೇಳೆ 2026-28 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಕೆರೀಂ ಪಿಲಿಪ್ಪುಡೆ, ಉಪಾಧ್ಯಕ್ಷರು ಗಳಾಗಿ ಆಬಿದ್ ಕುಕ್ಕಾಜೆ, ಹಾರಿಸ್ ಹಾಜಿ ಕುಕ್ಕಾಜೆ,
ಅಬೂಬಕ್ಕರ್ ಜನಪ್ರಿಯ, ಪ್ರಧಾನ ಕಾರ್ಯದರ್ಶಿಯಾಗಿ ಶಾಕಿರ್ ಫ್ಯೆಝಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಹಾಶಿಂ ಮ್ಯೆಂದನಡ್ಕ, ಜತೆ ಕಾರ್ಯದರ್ಶಿ ಗಳಾಗಿ ಆಸ್ಕರ್ ಪಡ್ಪ್, ರಫೀಕ್ ಎಂ ಜೆ ಎಂ, ಝುಬ್ಯೆರ್ ಪಲ್ಲತ್ತಾರು ಹಾಗೂ ಕೋಶಾಧಿಕಾರಿಯಾಗಿ ನಾಸಿರ್ ಕಾವುಂಜ ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ನೌಶಾದ್ ಕಾವುಂಜ,
ಹಕೀಂ ಫ್ಯೆಝಿ, ಹಾರಿಸ್ ಮುಸ್ಲಿಯಾರ್, ಇಬ್ರಾಹಿಂ ಕಾವುಂಜ, ಸುಹ್ಯೆಲ್ ಕಾವುಂಜ ಅವರನ್ನು ಆರಿಸಲಾಯಿತು.

ಕ್ಲಸ್ಟರ್ ಕೌನ್ಸಿಲರುಗಳಾಗಿ ಹಾರಿಸ್ ಹಾಜಿ, ನೌಶಾದ್ ಕಾವುಂಜ, ಇಬ್ರಾಹಿಂ ಬಡಗನ್ನೂರು, ಆಬಿದ್ ಕುಕ್ಕಾಜೆ, ಅಬ್ದುಲ್ಲ ಬಡಗನ್ನೂರು, ಆಲಿಕುಂಞಿ ಡೆಂಬಲೆ, ಹಮೀದ್ ಮ್ಯೆಂದನಡ್ಕ ಇವರನ್ನು ನೇಮಿಸಲಾಯಿತು.

ಟ್ರೆಂಡ್ ಉಸ್ತುವಾರಿಯಾಗಿ ನಾಸಿರ್ ಕಾವುಂಜ,ಇಬಾದ್ ಉಸ್ತುವಾರಿಯಾಗಿ ಹಕೀಂ ಫ್ಯೆಝಿ, ವಿಖಾಯ ಉಸ್ತುವಾರಿಯಾಗಿ ನೌಶಾದ್ ಕಾವುಂಜ, ಸರ್ಗಲಯ ಉಸ್ತುವಾರಿಯಾಗಿ ಆಸ್ಕರ್ ಪಡ್ಪ್, ತ್ವಲಬಾ ಉಸ್ತುವಾರಿ ಯಾಗಿ ಹಾರಿಸ್ ಹಾಜಿ ಕುಕ್ಕಾಜೆ,
ಮೀಡಿಯಾ ವಿಂಗ್ ಉಸ್ತುವಾರಿ ಯಾಗಿ ಹಾರಿಸ್ ಮುಸ್ಲಿಯಾರ್, ಇಸ್ಲಾಮಿಕ್ ಪ್ಯಾಮಿಲಿ ಕೌನ್ಸಿಲ್ ಉಸ್ತುವಾರಿಯಾಗಿ ಹಾಶಿಂ ಮ್ಯೆಂದನಡ್ಕ, ಕ್ಯಾಂಪಸ್ ವಿಂಗ್ ಉಸ್ತುವಾರಿಯಾಗಿ ಸುಹ್ಯೆಲ್ ಇವರನ್ನು ಘೋಷಿಸಲಾಯಿತು.