ಡೈಲಿವಾರ್ತೆ:24/ಸೆ./2026

ಕೋಡಿಕನ್ಯಾಣ: ಪೌರಕಾರ್ಮಿಕರ ಮನೆಗಳಿಗೆ ತೆರಳಿ ಗೌರವ ಸನ್ಮಾನ

ಕೋಟ: ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಶ್ರೀ ರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ವತಿಯಿಂದ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಮ್ಮ ಊರು ಹಾಗೂ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿನಿತ್ಯ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ, ಬಳಗದ ಸದಸ್ಯರು ಅವರ ಮನೆಗಳಿಗೆ ತೆರಳಿ ಆತ್ಮೀಯವಾಗಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರ ನಿಸ್ವಾರ್ಥ ಸೇವೆ, ಕರ್ತವ್ಯನಿಷ್ಠೆ ಹಾಗೂ ಸಮಾಜದ ಸ್ವಚ್ಛತೆಗಾಗಿ ಅವರು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು.

ಪೌರಕಾರ್ಮಿಕರಿಗೆ ಗೌರವ ಸಲ್ಲಿಸುವ ಮೂಲಕ ಅವರ ಶ್ರಮಕ್ಕೆ ಕೃತಜ್ಞತೆ ವ್ಯಕ್ತಪಡಿಸಲಾಯಿತು.
‘ಪೌರಕಾರ್ಮಿಕರ ಶ್ರಮವೇ ಸ್ವಚ್ಛ ಸಮಾಜದ ಶಕ್ತಿ. ಅವರ ಸೇವೆ ನಮ್ಮೆಲ್ಲರ ಹೆಮ್ಮೆ’ ಎಂಬ ಸಂದೇಶದೊಂದಿಗೆ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಎಲ್ಲಾ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಲಾಯಿತು.