


ಡೈಲಿವಾರ್ತೆ:27/ಸೆ./2026

ಬೇಳೂರು ಶಾಲೆಯ 130 ವಿದ್ಯಾರ್ಥಿಗಳಿಗೆ ರೋಟರಿ ಕೋಟ ಸಿಟಿಯಿಂದ ಸಮವಸ್ತ್ರ ಕೊಡುಗೆ

ಕೋಟ: ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸಮಾನತೆಯ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ರೋಟರಿ ಕೋಟ ಸಿಟಿ ವತಿಯಿಂದ ಬೇಳೂರು ಹಿರಿಯ ಪ್ರಾಥಮಿಕ ಶಾಲೆಯ 130 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.

ರೋಟರಿ ಜಿಲ್ಲೆ 3182ರ ಜಿಲ್ಲಾ ಕಾರ್ಯದರ್ಶಿ ರೊ. ಪ್ರಾಣೇಶ್ ಎಸ್.ಕೆ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕೋಟ ಸಿಟಿಯ ಅಧ್ಯಕ್ಷ ರೊ. ರಾಧಾಕೃಷ್ಣ ಬ್ರಹ್ಮಾವರ ವಹಿಸಿದ್ದರು. ರೋಟರಿ ಜಿಲ್ಲಾ ಯೋಜನೆಯ ‘ಹ್ಯಾಪಿ ಸ್ಕೂಲ್’ ಚೇರ್ಮನ್ ಶ್ಯಾಮ್ ಸುಂದರ್ ನಾಯರಿ, ರೋಟರಿ ಕೋಟ ಸಿಟಿ ಕಾರ್ಯದರ್ಶಿ ಉಮೇಶ್ ನಾಯರಿ, ಕಾರ್ಯಕ್ರಮದ ಸಂಚಾಲಕ ಮಂಜುನಾಥ ಉರಾಳ, ಶಾಲಾ ಮುಖ್ಯೋಪಾಧ್ಯಾಯಿನಿ ಶಾಲಿನಿ, ರೋಟರಿ ಕೋಟ ಸಿಟಿ ಆನ್ಸ್ ಕ್ಲಬ್ ಚೇರ್ಮನ್ ಶಿವಾನಂದ ನಾಯರಿ ಉಪಸ್ಥಿತರಿದ್ದರು.
ರೋಟರಿ ಕೋಟ ಸಿಟಿಯ ಸದಸ್ಯರಾದ ವಿಜಯ್ ದೇವಾಡಿಗ, ರವಿ ಬೇಳೂರು, ಉದಯ ಕುಮಾರ್ ಕೋಟ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸರ್ಜೆಂಟ್ ನಾಗರಾಜ ಐತಾಳ್ ಸೇರಿದಂತೆ ಶಿಕ್ಷಕರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕೋಟ ಸಿಟಿ ಕಾರ್ಯದರ್ಶಿ ಉಮೇಶ್ ನಾಯರಿ ವಂದಿಸಿದರು.