ಡೈಲಿವಾರ್ತೆ:02/ಅ./2026

ಬಾರ್ಕೂರು: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ: ಕಾಲು ಮುರಿತ

ಬ್ರಹ್ಮಾವರ: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿಗೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾಲು ಮುರಿದ ಘಟನೆ ಗುರುವಾರ ಬೆಳಗ್ಗೆ ಬಾರ್ಕೂರು-ಕೂರಾಡಿ ರಸ್ತೆಯ ಕುಂಟೂರು ಬಸ್‌ ನಿಲ್ದಾಣದ ಬಳಿ ನಡೆದಿದೆ.

ಹಾಸ್ಟೆಲ್‌ನಿಂದ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಸಂಗಮೇಶನಿಗೆ KA-19-D-6202 ನೋಂದಣಿ ಸಂಖ್ಯೆಯ ಇಕೋ ಕಾರು ಡಿಕ್ಕಿ ಹೊಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಕಾರಿನಲ್ಲೇ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೆ ಇಕೋ ಕಾರು ಚಾಲಕ ಪಾರಂಪಳ್ಳಿ ಸಯ್ಯದ್ ಬ್ಯಾರಿ ಅವರ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಹಾಸ್ಟೆಲ್ ಮೇಲ್ವಿಚಾರಕ ಮಂಜುನಾಥ ಹೆಚ್. ದೂರು ನೀಡಿದ್ದಾರೆ.
ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/2026ರಂತೆ BNS ಕಲಂ 281, 125(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.