ಡೈಲಿವಾರ್ತೆ:08/ಅ./2026

ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್ ಮತ್ತು ಟೈಲರಿಂಗ್ ಕೋರ್ಸ್ ಉದ್ಘಾಟನೆ.

ಬಂಟ್ವಾಳ : ತುಂಬೆಯ ಬಿ.ಎ. ಐಟಿಐನಲ್ಲಿ ನೂತನವಾಗಿ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್‌ನ ವಿಭಾಗವನ್ನು ಆರಂಭಿಸಲಾಯಿತು.

ದಿ. ಬಿ.ಎ. ಅಹಮ್ಮದ್ ಹಾಜಿ ಮೊಹಿಯುದ್ದೀನ್‌ ಅವರ ಧರ್ಮಪತ್ನಿ ಬಿ. ಫಾತಿಮಾ ಅಹಮ್ಮದ್ ಹಾಜಿ ಉದ್ಘಾಟಿಸಿದರು. ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಇದರ ಆಡಳಿತ ಮಂಡಳಿಯ ನಿರ್ದೇಶಕ ಬಿ. ಎಂ. ಅಶ್ರಫ್‌ ಅಧ್ಯಕ್ಷತೆ ವಹಿಸಿದ್ದು, ಸಾರ್ವಜನಿಕರು ಈ ತರಬೇತಿ ವಿಭಾಗದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಫೈಜಲ್ ಕೆ.ಇ. ಮಾತನಾಡಿ, ಫ್ಯಾಶನ್ ಡಿಸೈನಿಂಗ್ ಪ್ರಸ್ತುತ ಬಹುಬೇಡಿಕೆಯ ಕೋರ್ಸು ಆಗಿದ್ದು ಮುಖ್ಯವಾಗಿ ಮಹಿಳೆಯರಿಗೆ ಇದು ಸ್ವಉದ್ಯೋಗ ಮಾಡಲು ತುಂಬಾ ಅನುಕೂಲವಾದ ಕೋರ್ಸು ಎಂದರು. ಶಬನಾ ಫೈಜಲ್, ಸಾಜಿದಾ ಸಲಾಂ ಹಾಗೂ ತಾನಿಯಾ ಅಶ್ರಫ್‌ ಅತಿಥಿಗಳಾಗಿ ಭಾಗವಹಿಸಿದ್ದರು.

ಸೋಫಿಯಾ ಫೈಜಲ್, ಇಮಾದ್ ಹಾಗೂ ಸಹರಾ ಜಲ್, ರುರೀನಾ ಫೈಜಲ್, ಅರಖಾಲಿಯಾ ಅಶ್ರಫ್, ಗೆಬ್ರಿಯಾಲ ಅಶ್ರಫ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಬಿ. ಫಾತಿಮಾ ಅಹಮ್ಮದ್ ಹಾಜಿ ಅವರ 86 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಟೈಲರಿಂಗ್ ವಿಭಾಗದ ತರಬೇತಿ ಅಧಿಕಾರಿ ರಂಜಿತಾ ಅವರು ಟೈಲರಿಂಗ್ ಕೋರ್ಸಿನ ಮಹತ್ವ ಮತ್ತು ವಿಶೇಷತೆಯ ಬಗ್ಗೆ ತಿಳಿಸಿದರು. ಬಿ.ಎ. ಐಟಿಐ ನ ಪ್ರಾಂಶುಪಾಲ ನವೀನ್ ಕುಮಾರ್ ಸ್ವಾಗತಿಸಿ, ತರಬೇತಿ ಅಧಿಕಾರಿ ಗಾಯತ್ರಿ ವಂದಿಸಿದರು, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.