ಡೈಲಿವಾರ್ತೆ:12/ಅ./2026

ಹರ್ಬನ್ ಹಂಟರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾಟ, ಸಕ್ಸಸ್ ಕುಕ್ಕರಬೆಟ್ಟು ತಂಡಕ್ಕೆ ಪ್ರಶಸ್ತಿ

ಬಂಟ್ವಾಳ : ಹರ್ಬನ್ ಹಂಟರ್ಸ್ ಸ್ಪೋರ್ಟ್ಸ್ ಕ್ಲಬ್ ನೆಟ್ಲಮುಡ್ನೂರು ಇದರ ಆಶ್ರಯದಲ್ಲಿ ನಡೆದ ಹಂಟರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸಕ್ಸಸ್ ಕುಕ್ಕರಬೆಟ್ಟು ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕುಕ್ಕರಬೆಟ್ಟು ಸಕ್ಸಸ್ ಕ್ರೀಡಾಂಗಣದಲ್ಲಿ ಅ. 10 ಮತ್ತು 11 ರಂದು ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಇಂಡಿಯನ್ ಪಾಟ್ರಕೋಡಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಸಕ್ಸಸ್ ಕುಕ್ಕರಬೆಟ್ಟು ತಂಡದ ಮುಹಾಝ್ ಹಾಗೂ ಅಸಿಫ್, ಇಂಡಿಯನ್ ಪಾಟ್ರಕೋಡಿ ತಂಡದ ಖಲಂದರ್, ಟೀಮ್ ಡಿ.ಎಕ್ಸ್ ತಂಡದ ಆಸಿರ್ ಗಡಿಯಾರ, ಸರಫಿಯಾ ಪರ್ಲೋಟ್ಟು ತಂಡದ ರಾಝಿಕ್ ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಉದ್ಯಮಿಗಳಾದ ಅಹಮ್ಮದ್ ಹಾಜಿ ಕುಕ್ಕರಬೆಟ್ಟು ಉದ್ಘಾಟಿಸಿ, ಸಲೀಂ ಹಾಜಿ ಕುಕ್ಕರಬೆಟ್ಟು ಅಧ್ಯಕ್ಷತೆ ವಹಿಸಿದ್ದರು, ಪತ್ರಕರ್ತ ಲತೀಫ್ ನೇರಳಕಟ್ಟೆ, ನೇರಳಕಟ್ಟೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಶೀದ್ ಪಲೋಟ್ಟು, ಉದ್ಯಮಿಗಳಾದ ಹಾಜಿ ಸಿರಾಜ್ ಕುಕ್ಕರಬೆಟ್ಟು, ಮನ್ಸೂರ್ ನೇರಳಕಟ್ಟೆ, ಅಲಿ ಪಾಟ್ರಕೋಡಿ, ಉಸ್ಮಾನ್ ಎಂ. ಹೆಚ್. ಪಾಟ್ರಕೋಡಿ, ಲತೀಫ್ ಪಾಟ್ರಕೋಡಿ, ಅದ್ದು ಪರ್ಲೋಟ್ಟು, ನಿಶಾದ್ ಪಾಟ್ರಕೋಡಿ, ನಿಝಾಮ್ ಪಾಟ್ರಕೋಡಿ, ತಾಜು ಪಾಟ್ರಕೋಡಿ, ಬಶೀರ್ ಪಾಟ್ರಕೋಡಿ, ಹನೀಫ್ ಪಾಟ್ರಕೋಡಿ, ಆಶಿಕ್ ಪಲೋಟ್ಟು, ಸಮದ್ ಪರ್ಲೊಟ್ಟು , ಜುಬೈರ್ ಪರ್ಲೊಟ್ಟು , ಅಶ್ರಫ್ ಬಾರತ್ ಕಾರ್ಸ್, ರಫೀಕ್ ಎಸ್.ಎಸ್ ಕೊಡಾಜೆ, ಇರ್ಫಾನ್ ಸಾಹೇಬ್ ಪಂತಡ್ಕ, ಮೂಸಾ ಕರೀಂ ಮಾಣಿ, ಸಿದ್ದಿಕ್ ಸೂರ್ಯ, ಪ್ರಶಾಂತ್ ಸಂಗಮ್ ಗಣೇಶ್ ನಗರ, ಇಂಜಿನಿಯರ್ ಉಮರ್ ಫಾರೂಕ್ ನೇರಳಕಟ್ಟೆ, ಅಸೀಫ್ ಸೌದಿ ಅರೇಬಿಯಾ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಫೈಝಲ್ ನೇರಳಕಟ್ಟೆ, ರಶೀದ್ ರಚ್ಚಿ ನೇರಳಕಟ್ಟೆ, ಯಾಕೂಬ್ ಪರ್ಲೊಟ್ಟು ಹಾಗೂ ಶಫೀಕ್ ಅಪ್ಪಿ ಪರ್ಲೊಟ್ಟು ಪಂದ್ಯಾಟದ ನೇತೃತ್ವ ವಹಿಸಿದ್ದರು. ಹಾಶಿಮ್ ಕುಕ್ಕರಬೆಟ್ಟು, ಆಶಿಕ್, ಸಮ್ರಾಝ್ ಚಮ್ಮು ಪಂದ್ಯಾಟದ ವೀಕ್ಷಕ ವಿವರಣೆಗೈದರು.
ಶರೀಫ್ ಪರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು