ಡೈಲಿವಾರ್ತೆ:12/ಅ./2026

ಸಮಾಜದ ಅಭಿವೃದ್ಧಿಯಲ್ಲಿ ಸಹಕಾರ ಪಾತ್ರ ಮಹತ್ವದ್ದು ; ಎಡನೀರು ಶ್ರೀಗಳು

ಬಂಟ್ವಾಳ : ಮೆಲ್ಕಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟನಾ ಸಮಾರಂಭ ಸೋಮವಾರ ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿರುವ ಸರಾ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ನಡೆಯಿತು.

ಪ್ರಧಾನ ಕಚೇರಿಯನ್ನು ಉದ್ಘಾಟಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಮಾತನಾಡಿ ಸಹಕಾರ ತತ್ವವು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಹಕಾರ ಸಂಘವು ಗ್ರಾಹಕರ ವಿಶ್ವಾಸವನ್ನು ಗಳಿಸುವುದ ರೊಂದಿಗೆ ಪರಸ್ಪರ ಕೊಡು ಕೊಳ್ಳುವ ವ್ಯವಹಾರ ಉತ್ತಮವಾಗಿದ್ದಾಗ ಸಂಘವು ಪ್ರಗತಿ ಹೊಂದುತ್ತದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭದ್ರತಾ ಕೊಠಡಿ ಉದ್ಘಾಟಿಸಿ ಸಂಸ್ಥೆ ‌ಅಭಿವೃದ್ದಿಯಾಗಿ ಹೊಸ‌ ಶಾಖೆಗಳನ್ನು ತೆರೆಯಿವಂತಾಗಲಿ‌ ಎಂದರು. ವಿಶೇಷ ಠೇವಣಿಗಳ ಬಿಡುಗಡೆ ಮಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ , ವ್ಯವಹಾರ ಮಾಡುವವರು ಸಾಲವನ್ನು‌ ಕ್ಲಪ್ತ ಸಮಯಕ್ಕೆ ಮರು ಪಾವತಿಸಬೇಕು ಎಂದರು.

ಉದ್ಯಮಿಗಳಾದ ಸಂಜೀವ ಪೂಜಾರಿ ಗುರುಕೃಪಾ, ಚಂದ್ರಹಾಸ ಶೆಟ್ಟಿ ರಂಗೋಲಿ, ಎಂ.ಎನ್. ಕುಮಾರ್ ಮೆಲ್ಕಾರ್, ಬಿ.ಯೋಗೀಶ್ ನಾಯಕ್, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಂಜೀವ ನಾಯ್ಕ ನಿರ್ಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ವೇದವ್ಯಾಸ ರಾಮಕುಂಜ, ಎಂ.ಈಶ್ವರ ಭಟ್ಟ, ಜಯರಾಮ ಪೂಜಾರಿ, ಜಯರಾಮ ಶೇಖ, ಮುರಳೀಧರ ರಾವ್, ಭವಾನಿ ಶಂಕರ ಶೆಟ್ಟಿ, ರಮಾ ಎಸ್. ಭಂಡಾರಿ, ರಾಜೀವಿ ಎನ್. ವೃತ್ತಿಪರ ನಿರ್ದೇಶಕ ರಾಕೋಡಿ ಈಶ್ವರ ಭಟ್ ಮತ್ತು ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವ್ಯ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ನಿರ್ದೇಶಕರಾದ ಅನಂತ ಪ್ರಭು ವಂದಿಸಿದರು. ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.