


ಡೈಲಿವಾರ್ತೆ: 21/ನ./2026




ವಿಧಾನಪರಿಷತ್ತಿನ ಮುಖ್ಯ ಸಚೇತಕರಾಗಿ ಮಂಜುನಾಥ ಭಂಡಾರಿ ನೇಮಕ: ನವೀನ್ ಸಾಲಿಯಾನ್ ಅಭಿನಂದನೆ

ಕಾಪು: ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕರಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯ ನವೀನ್ ಸಾಲಿಯಾನ್ ಸ್ವಾಗತಿಸಿದ್ದಾರೆ.
ರಾಜ್ಯದ ವಿವಿಧ ನಿಗಮ-ಮಂಡಳಿಗಳು ಹಾಗೂ ಪ್ರಮುಖ ಸರ್ಕಾರಿ ಹುದ್ದೆಗಳಿಗೆ ಒಟ್ಟು 18 ಮಂದಿ ಶಾಸಕರು ಮತ್ತು ಮುಖಂಡರನ್ನು ನೇಮಕಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ನೇಮಕಾತಿಗಳ ಪೈಕಿ ಮಂಜುನಾಥ ಭಂಡಾರಿ ಅವರಿಗೆ ವಿಧಾನಪರಿಷತ್ತಿನ ಮುಖ್ಯ ಸಚೇತಕರ ಜವಾಬ್ದಾರಿ ವಹಿಸಿರುವುದು ಗಮನಾರ್ಹವಾಗಿದೆ.
ಮಂಜುನಾಥ ಭಂಡಾರಿ ಅವರ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿರುವ ನವೀನ್ ಸಾಲಿಯಾನ್ ಅವರು, ಈ ಜವಾಬ್ದಾರಿ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

