



ಡೈಲಿವಾರ್ತೆ: 27/ನ./2026




ಬ್ರಹ್ಮಾವರದಲ್ಲಿ ಉಡುಪಿ ಆಹಾರ ಉದ್ಯಮ ಮೇಳದ ವೈಭವದ ಪುರಮೆರವಣಿಗೆ

ಬ್ರಹ್ಮಾವರ, ನ.27: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ವತಿಯಿಂದ ಆಯೋಜಿಸಲಾಗಿರುವ ಉಡುಪಿ ಆಹಾರ ಉದ್ಯಮ ಮೇಳಕ್ಕೆ ಬ್ರಹ್ಮಾವರದಲ್ಲಿ ವೈಭವದ ಪುರಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು.

ಮಂಗಳೂರಿನ ಟೊಯೋಟಾ ಮಾರ್ಕೆಟಿಂಗ್ ಗ್ರೂಪ್ ಹೆಡ್ ಸೋನಿಯಾ ಎಂ., ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ಕೆ. ನಾಯರ್ ಹಾಗೂ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಅವರು ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು.




ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ, ಅಧ್ಯಕ್ಷ ವಿಶ್ವನಾಥ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಕಾನೂನು ಸಲಹೆಗಾರ ಹಾಗೂ ಉದ್ಯಮ ಮೇಳದ ಸಂಚಾಲಕ ಶ್ರೀಧರ್ ಪಿ.ಎಸ್., ಗೌರವ ಸಲಹೆಗಾರ ಸ್ಟ್ಯಾನ್ಲಿ ಹೆರಾಲ್ಡ್ ಡಿಸೋಜಾ, ಉಪಾಧ್ಯಕ್ಷರಾದ ಸುದೇವ ಶೆಟ್ಟಿ ಮತ್ತು ಕೆ.ಪಿ. ಶ್ರೀಶನ್, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಜೊತೆ ಕಾರ್ಯದರ್ಶಿಗಳಾದ ಗಣಪತಿ ಮರಕಾಲ ಹಾಗೂ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಇದಲ್ಲದೆ ಆಡಳಿತ ಮಂಡಳಿ ಸದಸ್ಯರಾದ ಅಮೃತ್ ಕುಮಾರ್ ತೌಳ, ದುರ್ಗಾ ಪ್ರಸಾದ್, ಸಂದೀಪ್, ಚಂದ್ರಶೇಖರ್, ಕೃಷ್ಣ ನಾಯ್ಕ್, ವಿಶ್ವನಾಥ್ ಪಿ., ಶಶಿಧರ ಗಾಣಿಗ, ರಿತೇಶ್ ಸುವರ್ಣ, ಹಸನಬ್ಬ, ಅಜಿತ್ ಶೆಟ್ಟಿ, ರಾಘವೇಂದ್ರ ಮಡಿಕುಳ, ಸಂತೋಷ ಕುಲಾಲ್, ವಿಶ್ವನಾಥ್ ಬಿ.ಎಸ್., ಸೋಮಶೇಖರ ಕೆ.ಎಸ್., ಸಂತೋಷ ಪೂಜಾರಿ, ಮಂಜುನಾಥ ಕಾಮತ್, ನವೀನ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಬ್ರಹ್ಮಾವರದ ಕುಂಚಾಲು ಸರ್ಕಲ್ನಿಂದ ಆರಂಭಗೊಂಡ ಪುರಮೆರವಣಿಗೆಯು ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ, ಆಹಾರ ಉದ್ಯಮ ಮೇಳ ಆಯೋಜಿಸಲಾಗಿರುವ ಗಾಂಧಿ ಮೈದಾನವನ್ನು ತಲುಪಿತು. ಮೆರವಣಿಗೆಯಲ್ಲಿ ತಟ್ಟಿರಾಯ, ಗೊಂಬೆಗಳ ಬಳಗ, ನಾಸಿಕ್ ಬ್ಯಾಂಡ್ ಹಾಗೂ ಕೀಲುಕುದುರೆಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು. ವಿವಿಧ ಕಲಾತಂಡಗಳ ಸಾಂಪ್ರದಾಯಿಕ ಪ್ರದರ್ಶನದೊಂದಿಗೆ ನಡೆದ ಮೆರವಣಿಗೆಯು ಆಹಾರ ಉದ್ಯಮ ಮೇಳದ ಸಂಭ್ರಮಕ್ಕೆ ಮೆರುಗು ನೀಡಿತು.

