ಡೈಲಿ ವಾರ್ತೆ : 29 ಸೆಪ್ಟೆಂಬರ್ 2022

ಮೆಲ್ಕಾರ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

ಬಂಟ್ವಾಳ : ವ್ಯಕ್ತಿತ್ವ ವಿಕಸನ ನಾಯಕತ್ವ, ಶ್ರಮ, ಸಮಾಜ ಸೇವೆ, ಸಹ ಬಾಳ್ವೆ ಮುಂತಾದ ಗುಣ, ಅವಕಾಶಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಒದಗಿಸಿ ಕೊಡುತ್ತದೆ ಎಂದು ಮೆಲ್ಕಾರ್ ಪದವಿ ಕಾಲೇಜುbಪ್ರಾಂಶುಪಾಲರಾದ ಬಿ.ಕೆ ಅಬ್ದುಲ್ ಲತೀಫ್ ಹೇಳಿದರು.

ಅವರು ಮೆಲ್ಕಾರ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಜನಾ ಅಧಿಕಾರಿಯಾದ ಅಬ್ದುಲ್ ಮಜೀದ್ ಎಸ್ ಸ್ವಯಂಸೇವಕರ ಜವಾಬ್ದಾರಿ, ಕರ್ತವ್ಯ, ಗುರಿಯ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಏಂಜಲಿನಾ ಸುನೀತಾ ಪಿರೇರಾ ಭಾಗವಹಿಸಿದ್ದರು. ಸಹ ಯೋಜನಾಧಿಕಾರಿ ಸಂಶುನ್ನಿಸ
ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ರಾ. ಸೇ. ಯೋ. ಸ್ವಯಂ ಸೇವಕರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿನಿ ಅಸ್ಬಹುನ್ನಿಸ ಸ್ವಾಗತಿಸಿ, ಅಕ್ಮಲ್ ಸುಲ್ತಾನ ಧನ್ಯವಾದವಿತ್ತರು.ಆಯಿಷಾ ಸಮ್ರಾ ಕಾರ್ಯಕ್ರಮ ನಿರ್ವಹಿಸಿದರು.