ಡೈಲಿ ವಾರ್ತೆ: 29 ಡಿಸೆಂಬರ್ 2022

ಅಂಕೋಲಾದ ಜಿ.ಸಿ.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವಿಶ್ವ ಮಾನವ ದಿನಾಚರಣೆ, ಕುವೆಂಪು ಆಧ್ಯಾತ್ಮಿಕ ಕಾಣೆಕೆ ಮತ್ತು ವೈಚಾರಿಕತೆ ಬಿತ್ತಿದ ಮಹಾಚೇತನರು :ಡಾ.ಆರ್.ಜಿ.ಗುಂದಿ

ವರದಿ: ವಿದ್ಯಾಧರ ಮೊರಬಾ

ಅಂಕೋಲಾ : ಕುವೆಂಪುರವರ ಬದುಕಿನಾದ್ಯಂತ ಕಾಡಿದ ಬಹುಮುಖ್ಯ ಭಾಗಗಳೆಂದರೆ ಮೊದಲಿನದು ಕನ್ನಡ
ಭಾಷೆ. ಅವರು ಬರೆದ ಕೃತಿಗಳಂತೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

ಜೀವನದಲ್ಲಿ ಎಂತಹುದೇ ಸಂದರ್ಭ ಬಂದರೂ ತಮ್ಮತನವನ್ನು ಕಳೆದುಕೊಳ್ಳಬಾರದು, ವೃತ್ತಿಗೆ ಮತ್ತು ಬದುಕಿಗೆ
ಬದ್ಧರಾಗಿರಬೇಕೆಂಬ ಮೌಲ್ಯವನ್ನು ಸಾರುವ ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣೆಕೆ ಮತ್ತು ವೈಚಾರಿಕತೆ ಬಿತ್ತಿದ ಮಹಾಚೇತನರು ಎಂದು ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ. ಗುಂದಿ ಹೇಳಿದರು.

ಜಿಲ್ಲಾಡಳಿತ, ಜಿಪಂ., ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿಯ ಜಿ.ಸಿ.ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಿಶ್ವ ಮಾನವ ದಿನಾಚರಣೆಯಲ್ಲಿ ಅವರು ಕುವೆಂಪು ಮತ್ತು
ಕನ್ನಡ ಕುರಿತು ಉಪನ್ಯಾಸ ನೀಡಿದರು.
ಜಿ.ಸಿ.ಕಾಲೇಜಿನ ಉಪನ್ಯಾಸ ಡಾ. ಎಸ್.ವಿ,ವಸ್ತ್ರದ ಮಾತನಾಡಿ, ಹುಟ್ಟುವ ಪ್ರತಿ ಮಗವು ವಿಶ್ವಮಾನವನೇ ನಂತರ ಆ
ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿ ಯಿಂದ
ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂದರು.


ಕುಮಟಾ ಸಹಾಯಕ ಆಯುಕ್ತ ರಾಘವೇಂದ್ರ ಜಗಳಾಸರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ಮಂತ್ರ ಮಾಂಗಲ್ಯ ಅನ್ನೋದು ರಾಷ್ಟ್ರ ಕವಿ ಕುವೆಂಪು ಹುಟ್ಟು ಹಾಕಿದ ಪರಿಕಲ್ಪನೆಯಾಗಿದೆ. ಅದ್ಧೂರಿ ಮದುವೆ
ಎಂಬುವುದು ಬಡ ಜನರ ಪಾಲಿಗೆ ಶಾಪವಾಗೋವುದನ್ನು ವಿರೋಧಿಸಿ, ಕುವೆಂಪು ತನ್ನ ಮಗ ಪೂರ್ಣ ಚಂದ್ರ
ತೇಜಸ್ವಿಗೆ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಮಾಡಿರಿವುದು ಮಾದರಿಯಾಗಿ ದ್ದರು ಎಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು, ಹಿರಿಯ ಸಾಹಿತಿ ಮೋಹನ ಹಬ್ಬು
ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಂ.,
ಪ್ರಾಚಾರ್ಯ ಡಾ.ಅಶೋಕಕುಮಾರ, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಮುಖ್ಯಾಧಿಕಾರಿ
ಎನ್.ಎಂ.ಮೇಸ್ತ, ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹಿರಿಯ ಸಾಹಿತಿ ವಿಷ್ಣು ನಾಯ್ಕ ಇತರರು
ಉಪಸ್ಥಿತರಿದ್ದರು. ತಹಸೀಲ್ದಾರ ಉದಯ ಕುಂಬಾರ, ತಾಪಂ.ಇಓ ಪಿ.ವೈ.ಸಾವಂತ, ಶಿಕ್ಷಕ ರಾಜೇಶ ಮಾಸ್ತರ,
ಕಂದಾಯ ನೀರಿಕ್ಷ ಸುರೇಶ ಹರಿಕಂತ್ರ ನಿರ್ವಹಿಸಿದರು.