ಡೈಲಿ ವಾರ್ತೆ: 30 ಡಿಸೆಂಬರ್ 2022

ಪ್ರಧಾನಿ‌ ಮೋದಿ ತಾಯಿ ಹೀರಾ ಬೇನ್ ವಿಧಿವಶ

ಅಹ್ಮದಾಬಾದ್: ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ನಿಧನರಾಗಿದ್ದಾರೆ.
ಈ ಕುರಿತು ಪ್ರಧಾನಿಯ ಟ್ವೀಟ್ ಉಲ್ಲೇಖಿಸಿ ಎ ಎನ್ ಐ ವರದಿ ಮಾಡಿದೆ.

ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಹೀರಾ ಬೆನ್ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಧಾನಿ ಮೋದಿಯವರು ಟ್ವೀಡ್ ನಲ್ಲಿ ತಮ್ಮ ತಾಯಿ ಹೀರಾಬೇನ್ ಮೋದಿಯವರು 100ನೇ ವಯಸ್ಸಿನಲ್ಲಿ ನಿಧನರಾಗಿರುವ ಬಗ್ಗೆ ತಿಳಿಸಿದ್ದಾರೆ.