ಡೈಲಿ ವಾರ್ತೆ:23 ಜನವರಿ 2023

ದಕ್ಷಿಣಕನ್ನಡ: ಕಾವೂರು ಬೆಂಕಿಗಾಹುತಿಯಾಯ್ತು ವಾಸದ ಮನೆ, ಕಂಗಾಲಾದ ಬಡ ಕುಟುಂಬ

ಮಂಗಳೂರು: ಇಲ್ಲಿನ ಕಾವೂರು ಪಳನೀರು ಎಂಬಲ್ಲಿ ಬಡ ಕುಟುಂಬದ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಸೋಮವಾರ ನಡೆದಿದೆ.

ಸೋಮವಾರ ಬೆಳಗ್ಗೆ ಮನೆಮಂದಿಯೆಲ್ಲಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಇಂದಿರಾ ಎಂಬವರಿಗೆ ಸೇರಿದ ಮನೆ ಹೊತ್ತಿ ಉರಿದಿದೆ.

ಸ್ಥಳೀಯರು, ಅಗ್ನಿಶಾಮಕ ದಳದ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಬೆಂಕಿ ನಂದಿಸಲಾಗಿದೆ.