ಡೈಲಿ ವಾರ್ತೆ: 28 ಜನವರಿ 2023

ಕರ್ನಾಟಕ ಮುಸ್ಲಿಂ ಜಮಾಅತ್ತ್ ಹೊನ್ನಾಳ ಯುನಿಟ್ ಸಮಿತಿ ರಚನೆ

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ತ್ ರಾಜ್ಯ ಸಮಿತಿಯ ನಿರ್ದೇಶನದಂತೆ ಸಂಘಟನೆಯನ್ನು ತಲಮಟ್ಟದಲ್ಲಿ ಬಲಪಡಿಸಲು ಯುನಿಟ್ ಸಮಿತಿಗಳ ರಚನೆ ರಾಜ್ಯಾದ್ಯಂತ ನಡೆಯುತ್ತಿದ್ದು ಅದರ ಭಾಗವಾಗಿ ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು ಹೊನ್ನಾಳ ಯುನಿಟ್ ಸಮಿತಿಯ ರಚನೆಯು ಜನವರಿ 27 ಶುಕ್ರವಾರ 8 ಗಂಟೆಗೆ ಜಾಮೀಯ ಮಸೀದಿಯ ಹೊನ್ನಾಳ ಇದರ ಸಭಾಂಗಣದಲ್ಲಿ ನಡೆಯಿತು.
ಮೌಲಾನಾ ಫಕ್ರುದ್ದಿನ್ ಮಿಸ್ಭಾಯಿ ರಝ್ವಿ ಯವರ ದುವಾದೂಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಇಮ್ರಾನ್ ಹೆನ್ನಾಬೈಲ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜುಕಾಕೂ ರಿಯಾಜ್ ಆಹ್ಮದ್ ಎಲ್ಲರನ್ನು ಸ್ವಾಗತಿಸಿ ವರದಿ ವಾಚಸಿದರು. ಕಾರ್ಯದರ್ಶಿ ತೌಸೀಫ್ ನೂರಿ ಲೆಕ್ಕ ಪತ್ರ ಮಂಡಿಸಿದರು.ಚರ್ಚೆಯ ನಂತರ ವರದಿ ಹಾಗೂ ಲೆಕ್ಕಪತ್ರ ಕ್ಕೆ ಅನುಮೋದನೆ ನೀಡಿ ಪ್ರಸ್ತುತ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಯಿತು.
ರಾಜ್ಯ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಮುಸ್ಲಿಂ ಜಮಾಅತ್ತ್ ನ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.


ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಜೆ. ಮುಷ್ತಾಕ್ ಅಹ್ಮದ್ ನೂತನ ಸಮಿತಿಯ ರಚನೆಗೆ ನೇತೃತ್ವ ನೀಡಿದರು
ನೂತನ ಸಮೀತಿಯ ಅಧ್ಯಕ್ಷರಾಗಿ ಇಮ್ರಾನ್ ಹೆನ್ನಾಬೈಲ್ ಪುನರಾಯ್ಕೆ ಗೊಂಡರು. ಪ್ರದಾನ ಕಾರ್ಯದರ್ಶಿಯಾಗಿ ಅಲ್ಲಾವುದ್ದೀನ್ ಸಾಹೇಬ್ ಕೋಶಾದಿಕಾರಿಯಾಗಿ ತೌಸೀಫ್ ನೂರಿ ಉಪಾಧ್ಯಕ್ಷರಾಗಿ ಬಿ. ಮುಹಮ್ಮದ್ ರಫೀಕ್ ಹಾಗೂ ನಜೀರ್ ಬಾಪು ಸಾಹೇಬ್ ಕಾರ್ಯದರ್ಶಿಗಳಾಗಿ ಮುಹಮ್ಮದ್ ಇಮ್ತಿಯಾಝ್ ಹೊನ್ನಾಳ ಹಾಗೂ ಬಿ. ಅಕ್ಬರ್ ಹುಸೇನ್ ರನ್ನು ಆಯ್ಕೆಯಾದರು. ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು
ನೂತನ ಕಾರ್ಯದರ್ಶಿ ಅಲ್ಲಾವುದ್ದೀನ್ ಸಾಹೇಬ್ ಧನ್ಯವಾದ ಸಮರ್ಪಿಸಿದರು. ಮೂರು ಸ್ವಲಾತ್ ನೂಂದಿಗೆ ಸಭೆಯನ್ನು ಮುಗಿಸಲಾಯಿತು.