ಡೈಲಿ ವಾರ್ತೆ: 29 ಜನವರಿ 2023

ಫರಂಗಿಪೇಟೆ ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಹಾಗೂ ರಕ್ತದಾನ ಶಿಬಿರ

ಬಂಟ್ವಾಳ, ಜ.29 : ಫರಂಗಿಪೇಟೆ ರೇಂಜ್ ಜಂ- ಇಯ್ಯತುಲ್ ಮುಅಲ್ಲಿಮೀನ್ ಮದರಸ ಮ್ಯಾನೇಜ್ ಮೆಂಟ್ ಅಸೋಸಿಯೇಶನ್, ಎಸ್ಕೆಎಸ್‌‌ಎಸ್ಸೆಪ್ ಫರಂಗಿಪೇಟೆ ಕ್ಲಸ್ಟರ್, ವಿಖಾಯ ರಕ್ತದಾನಿ ಬಳಗ ದ.ಕ. ವೆಸ್ಟ್ ಇವರ ಸಹಯೋಗದಲ್ಲಿ ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಹಾಗೂ ರಕ್ತದಾನ ಶಿಬಿರ ಭಾನುವಾರ ದಂದು ಫರಂಗಿಪೇಟೆಯಲ್ಲಿ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿದ ಫರಂಗಿಪೇಟೆ ಮುಹಿಯದ್ದೀನ್ ಜುಮಾ ಮಸೀದಿ ಖತೀಬ್ ಕೆ.ವಿ.ಅಬ್ಬಾಸ್ ದಾರಿಮಿ ಮಾತನಾಡಿ ಯುವಕರು ನಿರಂತರವಾಗಿ ಸೇವಾ ಮನೋಭಾವ ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಮಹತ್ತರವಾದ ಪರಿವರ್ತನೆ ಸಾಧ್ಯ ಎಂದ ಅವರು .
ಸಮಾಜದಲ್ಲಿ ಅನಾಥರ ದೀನದಲಿತರ ಬಡವರ ಬಗ್ಗೆ ಕಾಳಜಿಯಿಂದ ಅವರ ಬಾಳಿಗೆ ಬೆಳಕಾಗುವ ಇಂತಹ ಕಾರ್ಯಕ್ರಮ ಗಳು ಮಾದರಿಯಾಗಿದ್ದು ಓರ್ವ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಇತರರಿಗೆ ಪ್ರೇರಣೆ ಯಾಗಲಿದೆ ಎಂದರು .

ಫರಂಗಿಪೇಟೆ ಮದರಸ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಹಸನಬ್ಬ ಗುಡ್ಡಮನೆ ಅಧ್ಯಕ್ಷತೆ ವಹಿಸಿದ್ದರು. ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಆಲ್ ಖಾಸಿಮಿ ಬಂಬ್ರಾಣ ದುಆ ಎನೆರವೇರಿಸಿದರು.

ಚೊಕ್ಕಪಟ್ನ ಜುಮಾ ಮಸೀದಿ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಅನುಸ್ಮರಣಾ ಭಾಷಣ ಮಾಡಿದರು.

ಫರಂಗಿಪೇಟೆ ಮುಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ , ಚೇಳಾರಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಖಾಸಿಂ ಮುಸ್ಲಿಯಾರ್, ಪುದು ಗ್ರಾ.ಪಂ‌‌. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹತ್ತನೇ ಮೈಲು ತ್ವಾಹ ಮಸ್ಜಿದ್ ಖತೀಬ ಸದ್ದಾಮ್ ಫೈಝಿ, ಅಮ್ಮೆಮಾರ್ ಬದ್ರಿಯಾ ಜುಮಾ ಮಸೀದಿ ಖತೀಬ ಮಹಮ್ಮದ್ ಅಲಿ ಫೈಝಿ ಇರ್ಪಾನಿ, ತುಂಬೆ ಮುಹಿಯದ್ದೀನ್ ಜುಮಾ ಮಸೀದಿ ಖತೀಬ ಅಬ್ದುಲ್ ಲತೀಫ್ ಫೈಝಿ , ಕುಂಪಣಮಜಲು ಅರಫ ಜುಮಾ ಮಸೀದಿ ಖತೀಬ್ ಉಬೈದುಲ್ಲಾ ಆಝ್ಆರಿ , ಸುಜೀರ್ ಮಲ್ಲಿ ಜುಮಾ ಮಸೀದಿ ಖತೀಬ್ ಮಹಮ್ಮದ್ ಅಶ್ರಫ್ ಅಹ್ಸನಿ, ಪೆರಿಮಾರ್ ಮೌಲ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಇರ್ಪಾನಿ, ಸುಜೀರ್ ಗುಡ್ಡೆ ಇರ್ಶಾದುಲ್ ಅತ್ಪಾಲ್ ಮದರಸ ಖತೀಬ ನಿಯಾಝ್ ಫೈಝಿ, ಫರಂಗಿಪೇಟೆ ರೇಂಜ್ ಜಂ- ಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಅಬು ಹುವೈಸಿ ಮುಸ್ಲಿಯಾರ್ , ಎಸ್‌ಕೆಎಸ್ಸೆಸ್ಸೆಫ್ ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಮೊಹಮ್ಮದ್ ಸಕ್ವೀರ್, ಅಮ್ಮೆಮಾರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಮರಬ್ಬ ಹಾಜಿ, ಕುಂಪಣಮಜಲ್ ಅರಫಾ ಜುಮಾ ಮಸೀದಿ ಅಧ್ಯಕ್ಷ ಬುಖಾರಿ, ಸುಜೀರ್ ಮಲ್ಲಿ ಹೈದ್ರೂಸಿ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಮಲ್ಲಿ, ಕುಂಜತ್ಕಳ ನೂರುಲ್ ಹುದಾ ಮದರಸ ಅಧ್ಯಕ್ಷ ಯು.ಎಚ್ ಅಶ್ರಫ್ , ಜುವೈರಿಯಾ ಸ್ಕೂಲ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ತುಂಬೆ ಬಿ‌.ಎ.ಸ್ಕೂಲ್ ನ ಅಧ್ಯಕ್ಷ ಕಬೀರ್ ಮಾಸ್ಟರ್, ಎಸ್ಕೆಎಸ್ಸೆಸ್ಸೆಫ್ ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಮೊಹಮ್ಮದ್ ನಝೀರ್ ಅತಿಥಿಗಳಾಗಿ ಭಾಗವಹಿಸಿದ್ದರು.

ರೇಂಜ್ ಜಂ- ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ ಸ್ವಾಗತಿಸಿ, ಮದರಸ ಮ್ಯಾನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪಣಮಜಲು ವಂದಿಸಿದರು. ಅಬ್ದುಲ್ ಹಮೀದ್ ಕಾರ್ಯಕ್ರಮ‌ ನಿರೂಪಿಸಿದರು.