ಡೈಲಿ ವಾರ್ತೆ: 29 ಜನವರಿ 2023

ಗೆಳೆಯರ ಬಳಗ ಕಾರ್ಕಡ 35ನೇ ವರ್ಷದ ವಾರ್ಷಿಕೋತ್ಸವ: ಸಾಧಕರಿಗೆ ಸಮ್ಮಾನ

ಕೋಟ : ಗೆಳೆಯರ ಬಳಗ ಕಾರ್ಕಡ- ಸಾಲಿಗ್ರಾಮ ಇದರ 35ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸಮ್ಮಾನ
ಜ.28 ರಂದು ಕಾರ್ಕಡ ಹೊಸ ಹಿ.ಪ್ರಾ.ಶಾಲೆ “ಪಾರ್ವತಿ ಎಸ್. ಹೊಳ್ಳ ರಂಗ ಮಂಟಪದಲ್ಲಿ ಜರಗಿತು.

ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಮಾತನಾಡಿ, ಗೆಳೆಯರ ಬಳಗವು ಮಾದರಿ ಸಂಸ್ಥೆಯಾಗಿದ್ದು, ಇಲ್ಲಿನ ಪ್ರತಿಯೊಂದು ಕಾರ್ಯಕ್ರಮಗಳು ಇತರ ಸಂಘಟನೆಗಳಿಗೆ ಮಾದರಿ ಎಂದರು.


ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಶಂಕರ ದೇವಾಡಿಗರನ್ನು ಸಮ್ಮಾನಿಸಲಾಯಿತು.
ನಿವೃತ್ತ ಯೋಧ ರವಿ ನಾಯರಿ, ಕೊಲ್ಲೂರು ಮೂಕಾಂಬಿಕಾ ದೇಗುಲದ ಧರ್ಮದರ್ಶಿ ಕೆ.ಪಿ. ಶೇಖರ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಕೆ. ಎಸ್. ಹಾಗೂ ಪತ್ರಕರ್ತ ರಾಜೇಶ್ ಅವರನ್ನು ಗೌರವಿಸಲಾಯಿತು. ಶ್ರೀಪ್ರೀಯ, ಕಾರ್ತಿಕ್, ಸಮೀಕ್ಷಾ, ಗೀಷ್ಮ, ಸುಜಿನ್ ಕುಮಾರ್, ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ದತ್ತಿನಿಧಿ ವಿತರಿಸಲಾಯಿತು.

ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,
ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನಿರ್ದೇಶಕ ಕೆ. ಅಚ್ಯುತ ಪೂಜಾರಿ, ನಿರ್ದೇಶಕಿ ಪ್ರೇಮ ಶಂಭು ಪೂಜಾರಿ,
ನ್ಯೂ ಕಾರ್ಕಡ ಶಾಲೆ ಮುಖ್ಯ ಶಿಕ್ಷಕ ಎನ್. ಪ್ರಭಾಕರ ಕಾಮತ್, ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ ಆಚಾರ್ಯ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಶಶಿಧರ್ ಮಯ್ಯ ಹಾಗೂ ಕೆ . ಜಗದೀಶ ಆಚಾರ್ಯ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ಸ್ಥಳೀಯ ಪ್ರತಿಭೆಗಳಿಂದ ಗಾನ ಹಾಗೂ ನೃತ್ಯವೈವಿಧ್ಯ, ಕನ್ನಡ ಮತ್ತು ಸಂಸ್ಕೃತಿ ಉಡುಪಿ ಜಿಲ್ಲೆ ಸಹಕಾರದಿಂದ ಕೆ.ಶೀನ ಮತ್ತು ಬಳಗದವರಿಂದ ಸಾಮಾಜಿಕ ನಾಟಕ “ಯಾರಿವಳು” ಪ್ರದರ್ಶನ ಗೊಂಡಿತು.