ಡೈಲಿ ವಾರ್ತೆ: 30 ಜನವರಿ 2023
ಬದುಕಿಗೊಂದು ಹೊಸ ಹುರುಪನ್ನು
ನೀಡುವ ಶಕ್ತಿ ಕಿರುಚಿತ್ರಕ್ಕಿದೆ: ಸುಜಯೀಂದ್ರ ಹಂದೆ
ವಿಜಿತ್ ಮಲ್ಯಾಡಿಯವರ ಕಿರುಚಿತ್ರದ ಶೀರ್ಷಿಕೆ “ದಿಮ್ಸಾಲ್”
ಪೋಸ್ಟರ್ ಬಿಡುಗಡೆ
ತೆಕ್ಕಟ್ಟೆ: ಬದುಕಿಗೊಂದು ಹೊಸ ಹುರುಪನ್ನು ನೀಡುವ ಶಕ್ತಿ ಕಿರುತೆರೆ ಮತ್ತು ರಂಗಭೂಮಿಗೆ ಇದೆ. ನಮ್ಮನ್ನು ನಾವು
ಅಂತಃರ್ಮುಖಿಗಳಾಗಿ ಹೊಕ್ಕು ಚಿಂತನೆ ನಡೆಸುವಲ್ಲಿ ಕಿರುಚಿತ್ರಗಳ ಕೊಡುಗೆ ಗುರುತರವಾದದ್ದು. ಯುವ ನಿರ್ದೇಶಕ ವಿಜಿತ್ ಮಲ್ಯಾಡಿಯವರಿಂದ ಹೊಸ ಮುನ್ನೋಟವುಳ್ಳ
ಕಿರುಚಿತ್ರ ಸಮಾಜಮುಖಿಯಾಗಿ ಹೊಸ ಚಿಂತನೆಯನ್ನು ಹೊತ್ತು ಹೊರಬರಲಿ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.
ಅವರು ತೆಕ್ಕಟ್ಟೆ ಹಯಗ್ರೀವದಲ್ಲಿ ಜನವರಿ 30ರಂದು ವಿಜಿತ್
ಮಲ್ಯಾಡಿಯವರ ಕಿರುಚಿತ್ರದ ಶೀರ್ಷಿಕೆ “ದಿಮ್ಸಾಲ್”
ಪೋಸ್ಟರ್‍ನ್ನು ಯಶಸ್ವಿ ಕಲಾವೃಂದ (ರಿ.) ಕೊಮೆ, ಮಂದಾರ (ರಿ.) ಬೈಕಾಡಿ ಬ್ರಹ್ಮಾವರ, ದೀಪಕ್ ರಾಮ್ ನೇತೃತ್ವದ ಬಿತ್ತಿಚಿತ್ರ ಸಿನಿಮಾಸ್ ತಂಡದವರ ಸಹಕಾರದೊಂದಿಗೆ ಬಿಡುಗಡೆಗೊಳಿಸಿ
ಸುಜಯೀಂದ್ರ ಹಂದೆ ಮಾತನ್ನಾಡಿದರು.
ಯಕ್ಷಗುರು ಸೀತಾರಾಮ ಶೆಟ್ಟಿ ಕೊೈಕೂರು, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಛಾಯಾಗ್ರಾಹಕರಾದ ಗಿರಿಧರ್ ಕೋಟ, ಕಿರುಚಿತ್ರ ತಂಡದವರಾದ ಪ್ರದೀಪ್ ಪಡುಕೆರೆ, ಥಾಮಸ್ ಡಿ’ಸೋಜ, ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ,
ಶ್ರೀ ಕೈಲಾಸ ಕಲಾಕ್ಷೇತ್ರದ ಕಾರ್ಯದರ್ಶಿಯೋಗೀಶ್ ಭಟ್, ಕಿರುಚಿತ್ರದ ನಿರ್ದೇಶಕ ವಿಜಿತ್ ಮಲ್ಯಾಡಿ ಉಪಸ್ಥಿತರಿದ್ದರು. ಪ್ರಶಾಂತ್ ಮಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.