



ಡೈಲಿ ವಾರ್ತೆ: 31 ಜನವರಿ 2023


ಕಳ್ಳತನದ ಆರೋಪಿ
ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ.!
ಬೆಂಗಳೂರು: ಫಿನಾಯಿಲ್ ಕುಡಿದು ಆರೋಪಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಗೋಪಾಲನಗರದ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅಬ್ರಾರ್ ಎಂಬುವನು ಕಳೆದ ಡಿಸೆಂಬರ್ ನಲ್ಲಿ ಸರಗಳ್ಳತನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದನು . ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಶೌಚಾಲಯ ಹೋಗುವ ನೆಪದಲ್ಲಿ ಪಿನಾಯಿಲ್ ಕುಡಿದಿದ್ದಾನೆ.
ತುಂಬಾ ಹೊತ್ತಾದರೂ ಬಾರದ ಅಬ್ರಾರ್ ನ್ನು ಗಮನಿಸಿ ಶೌಚಾಲಯಕ್ಕೆ ಹೋದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ. ಆರೋಪಿಯನ್ನು ಹತ್ತಿರದ ಹೆಗ್ಗನಹಳ್ಳಿ ಜೈಮಾರುತಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ರಾಜಗೋಪಾಲನಗರ ಪೊಲೀಸರು ಮಾಹಿತಿ ನೀಡಿದ್ದಾರೆ.