ಡೈಲಿ ವಾರ್ತೆ:01 ಫೆಬ್ರವರಿ 2023



ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ

ತಾಯಿ ಮೂಕಾಂಬಿಕೆ ಸನ್ನಿಧಿಗೆ ನೂತನ ಬ್ರಹ್ಮರಥ ಸಮರ್ಪಣೆ ಸುಯೋಗ…, 400 ವರ್ಷಗಳ ಹಳೆಯ ರಥಕ್ಕೆ ಇತಿಶ್ರೀ….!, ಹಳೆಯ ರಥದ ಪಡಿ ಅಚ್ಚು ತೆಗೆದು ನಿರ್ಮಾಣ..,
ದಿವಂಗತ ಆರ್ .ಎನ್. ಶೆಟ್ಟಿ ಪುತ್ರ ಸುನಿಲ್ ಶೆಟ್ಟಿ ರವರ ಕೊಡುಗೆ…!,

ಸುದ್ದಿ @ಕೊಲ್ಲೂರು: ಪರಶುರಾಮ ಸೃಷ್ಟಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಲವರು ಐತಿಹಾಸಿಕ ಪ್ರಸಿದ್ಧ ತಾಣಗಳಿಗೆ ಸಾಕ್ಷಿಯಾಗಿದೆ ಅದೇ ರೀತಿ ಮೂಕಾಂಬಿಕಾ ಸಂವಿಧಾನಕ್ಕೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಿಂದ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆದು ಪುನೀತರಾಗುತ್ತಾರೆ ಅದೇ ರೀತಿ ದೇಶದಲ್ಲಿನ ಅತ್ಯುನ್ನತ ಪ್ರಕರಾತೆಗಳನ್ನು ಹೊಂದಿರುವ ಕೊಲ್ಲೂರು ಮೂಕಾಂಬಿಕೆ ದೇಗುಲ ತನ್ನದೇ ಆದಂತಹ ಐತಿಹಾಸಿಕ ದಂತಕಥೆಯನ್ನು ಹೊಂದಿದೆ ಸಮಾಜಮುಖಿ ಚಿಂತನೆ ಅಂದಿಗೆ ನಡೆಯುವಂತಹ ಧಾರ್ಮಿಕ ಸೇವೆಗಳು ಅನ್ನದಾನ ಸೇವೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳು ಸಮಾಜದಲ್ಲಿನ ಭಕ್ತಿಯ ಪರಾಕಷ್ಟೆಯಾಗಿ ಉಳಿದಿರುವುದು ನಿಜಕ್ಕೂ ಸಂತಸದ ವಿಚಾರ ಅದೇ ರೀತಿ ಸಮಾಜದಲ್ಲಿನ ಭಕ್ತಿ ಕೇಂದ್ರವಾಗಿ ನಯಾಗುವುದರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕ ತಾಯಿಯು ದರುಶನ ಭಾಗ್ಯವನ್ನು ಸದಾ ನೀಡುತ್ತಿದ್ದಾಳೆ ಅದೇ ರೀತಿ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಐತಿಹಾಸಿಕ ಪುರಾಣ ಪ್ರಸಿದ್ಧ ಸ್ಥಾನವಾಗಿ ಮಾರ್ಪಟ್ಟಿದೆ ಅದಲ್ಲದೆ ಸಮಾಜಮುಖಿ ಚಿಂತನೆ ಉಳ್ಳಂತಹ ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ವಿಶಿಷ್ಟ ರೀತಿಯಲ್ಲಿ ಭಕ್ತರನ್ನ ತನ್ನತ್ತ ಸೆಳೆದುಕೊಂಡು ದರುಶನವನ್ನು ನೀಡುತ್ತಾಳೆ ತಾಯಿ ಮೂಕಾಂಬಿಕೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ ಯಾರಿಗೆ ಗೊತ್ತಿಲ್ಲಾ ಹೇಳಿ. ರಾಜ್ಯ, ಹೊರ ರಾಜ್ಯದ ಭಕ್ತರು ಇಲ್ಲಿ ಆಗಮಿಸಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ಶಕ್ತಿ ಪೀಠದ ಮಹಿಮೆ ಎನ್ನಬಹುದು. ಅದರಲ್ಲೂ ಸೆಲೆಬ್ರಿಟಿಗಳು, ರಾಜಕಾರಣಿಗಳು ಭೇಟಿ ನೀಡುವ ರಾಜ್ಯದ ದೇವಳದಗಳಲ್ಲಿ ಒಂದಾಗಿರುವ ಕೊಲ್ಲೂರಿಗೆ ಹೊಸ ಕೊಡುಗೆಯೊಂದು ಕೆಲವೇ ದಿನಗಳಲ್ಲಿ ಸಲ್ಲಲಿದೆ. ಸುಮಾರು 400 ವರ್ಷಗಳ ಬಳಿಕ ಆಗುತ್ತಿರುವ ಬದಲಾವಣೆಗೆ ಕ್ಷೇತ್ರದ ಭಕ್ತರು ಕಾಯುತ್ತಿದ್ದಾರೆ. ಹೌದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳ ರಾಜ್ಯ, ಹೊರ ರಾಜ್ಯದಲ್ಲೂ ಪ್ರಖ್ಯಾತವಾಗಿರುವ ಕ್ಷೇತ್ರ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಲ್ಲೂ ರಾಜ್ಯದ ಸಿನೆಮಾ ತಾರೆಯರು, ಸೆಲೆಬ್ರಿಟಿಗಳು, ರಾಜ್ಯದ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಸದ್ಯ ಈ ದೇವಳ ವಾರ್ಷಿಕ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಜಾತ್ರಾ ಮಹೋತ್ಸವದ ಬಳಿಕ ದೇವಳದ ಬ್ರಹ್ಮಕಲಶೋತ್ಸವವು ಕೂಡ ನಡೆಯಲಿದೆ. ಈ ದೇವಳದ ಅತ್ಯಂತ ಪುರಾತನ ಅಂದರೆ 400 ವರ್ಷ ಹಳೆಯದಾದ ರಥ ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ ನೂತನ ರಥದ ನಿರ್ಮಾಣ ಕಾರ್ಯ ಪ್ರಾರಂಭವಾಗಿ 9 ತಿಂಗಳು ಕಳೆದಿದ್ದು, ಸದ್ಯ ರಥ ಸಂಪೂರ್ಣವಾಗಿ ಸಿದ್ಧವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಿಗಳು ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ, ಹಳೆ ರಥದ ಪಡಿಯಚ್ಚು ತೆಗೆದು ಹೊಸ ರಥ ನಿರ್ಮಿಸಿದ್ದಾರೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ. ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ. ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಶೆಟ್ಟಿ ಅವರು ನೂತನ ರಥ ನಿರ್ಮಾಣದ ವೆಚ್ಚ ಭರಿಸಿದ್ದಾರೆ. ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಇದೇ ಫೆಬ್ರವರಿಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುತ್ತಿದ್ದು, ಮಾರ್ಚ್‌ನಲ್ಲಿ ನಡೆಯಲಿರುವ ದೇಗುಲದ ರಥೋತ್ಸವದಲ್ಲಿ ನೂತನ ರಥ ಬಳಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ದೇಗುಲದಲ್ಲಿ ಈ ವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೂತನ ರಥದಲ್ಲಿ ಕೂಡ ರೂಪಿಸಿರುವುದು ರಥ ಶಿಲ್ಪಿಗಳ ಕೈಚಳಕವನ್ನು ಎತ್ತಿಹಿಡಿದಿದೆ. ಸುಮಾರು 42 ಜನ ಕುಶಲಕರ್ಮಿಗಳು 9 ತಿಂಗಳುಗಳ ಕಾಲ ಶ್ರಮವಹಿಸಿ ರಥವನ್ನು ಸಿದ್ಧಪಡಿಸಿದ್ದಾರೆ ಎನ್ನುತ್ತಾರೆ ರಥಶಿಲ್ಪಿ ರಾಜಗೋಪಾಲ ಆಚಾರ್ಯ.
ಒಟ್ಟಾರೆಯಾಗಿ ಹಳೆಯ ರಥದ ಜೆರಾಕ್ಸ್ ನಂತೆ ಹೊಸ ರಥ ನಿರ್ಮಾಣವಾಗಿದೆ. ಇನ್ನು, 400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್‌ ಬಳಸಿ ಭಕ್ತರ ವೀಕ್ಷಣೆಗೆ ಇರಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ನೂತನ ರಥವೇರಿ ಬರುವ ತಾಯಿ ಮೂಕಾಂಬಿಕೆಯ ದರ್ಶನ ಪಡೆಯಲು ಭಕ್ತರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಸಮಾಜಮುಖಿ ಚಿಂತನೆಯ ಉದ್ಯಮಿ ಆರ್. ಎನ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯ ಹಿಂದಿನ್ ದಿನಗಳಲ್ಲಿ ಪ್ರಸ್ತುತವಾಗಿದೆ ಇದೀಗ ಅವರ ಪುತ್ರ ಸುನಿಲ್ ಶೆಟ್ಟಿ ಅವರ ಮುಂದಾಳತ್ವದಲ್ಲಿ 400 ವರ್ಷದ ಹಳೆಯ ರಥವನ್ನು ಸಂಚಾರ ನಿಲ್ಲಿಸಿ, ಇದೀಗ ಹೊಸ ರಥಕ್ಕೆ ಮಣೆ ಹಾಕಿದ್ದಾರೆ. ತ್ರೀಡಿ ತಂತ್ರಜ್ಞಾನದೊಂದಿಗೆ ನೂತನವಾಗಿ ನಿರ್ಮಿಸುವುದರ ಮೂಲಕ ದೇಗುಲಕ್ಕೆ ಇನ್ನಷ್ಟು ನೂತನವಾಗಿ ರಥ ನಿರ್ಮಾಣ ಕಾರ್ಯ ನಡೆದಿದ್ದು 9 ತಿಂಗಳುಗಳ ಕಾಲ ನಿರಂತರವಾಗಿ ರಥ ವಿನ್ಯಾಸದ ಹಾಗೂ ವಿಶಿಷ್ಟ ರೀತಿಯ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ.

✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ

ಸದ್ಯದಲ್ಲಿ ವಿಶಿಷ್ಟ ರೀತಿಯ ರಥವು ದೇಗುಲಕ್ಕೆ ಸಮರ್ಪಣೆ ಯಾಗುವುದರ ಮೂಲಕ ತಾಯಿ ಮುಖಾಂಭಿಕೆ ಇನ್ನಷ್ಟು ಶಕ್ತಿ ತುಂಬುತ್ತಾಳೆ ಎನ್ನುವುದು ಭಕ್ತರ ನಂಬಿಕೆ.