ಡೈಲಿ ವಾರ್ತೆ:04 ಫೆಬ್ರವರಿ 2023

ಜಪ್ಪಿನಮೊಗರು: ಗ್ಯಾರೇಜ್ ನಲ್ಲಿ ಭಾರೀ ಅಗ್ನಿ ಅವಘಡ: ಹಲವು ವಾಹನಗಳು ಭಸ್ಮ

ಮಂಗಳೂರು: ಗ್ಯಾರೇಜ್ ನಲ್ಲಿ ಭಾರೀ ಅಗ್ನಿ ಅವಘಡವಾಗಿ ಹಲವು ವಾಹನಗಳು ಭಸ್ಮವಾಗಿರುವ ಘಟನೆ ಜಪ್ಪಿನಮೊಗರು ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿರುವ ವಾಹನ ದುರಸ್ಥಿ ಮಾಡುವ ಗ್ಯಾರೇಜ್ ಸಂಪೂರ್ಣ ಹೊತ್ತಿ ಉರಿಯುತ್ತಿದ್ದು ಹತ್ತಾರು ವಾಹನಗಳು ಬೆಂಕಿಗಾಹುತಿಯಾಗಿವೆ.

ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಫರ್ಮರ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಆಗಮಿಸಿ ಬೆಂಕಿ ಆರಿಸಲು ಹರಸಾಹಸಪಟ್ಟಿದ್ದಾರೆ.