ಡೈಲಿ ವಾರ್ತೆ:08 ಫೆಬ್ರವರಿ 2023

ಬ್ರಾಹ್ಮಣ ವಿರೋಧಿ ಹೇಳಿಕೆ: ಮೋಹನ್ ಭಾಗವತ್ ವಿರುದ್ಧ ಪ್ರಕರಣ ದಾಖಲು

ಪಾಟ್ನಾ: ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಜಾಫರ್‌ಪುರ ಮೂಲದ ವಕೀಲ ಸುಧೀರ್ ಕುಮಾರ್ ಓಜಾ ಅವರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, RSS ಮುಖ್ಯಸ್ಥರ ಹೇಳಿಕೆಯು ಪಂಡಿತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.


ಭಾನುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಮಾರಕವಾಗಿದೆ. ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ.
ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪಂಡಿತರಾಗಿದ್ದಾರೆ. ಇದು ತಪ್ಪು ಎಂದು ಹೇಳಿದ್ದರು.