



ಡೈಲಿ ವಾರ್ತೆ:18 ಫೆಬ್ರವರಿ 2023


ವಕ್ವಾಡಿ ಕೋಳಿ ಅಂಕಕ್ಕೆ ದಾಳಿ ಇಬ್ಬರ ಬಂಧನ,13 ಹುಂಜ ವಶಕ್ಕೆ
ಕುಂದಾಪುರ : ಕುಂದಾಪುರ ತಾಲೂಕಿನ ವಕ್ವಾಡಿ ಹೆಗ್ಗರ್ ಬೈಲುವಿನ ಚಿಕ್ಕು ಅಮ್ಮ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಫೆ.17 ರಂದು ಕುಂದಾಪುರ ತಾಲೂಕಿನ ವಕ್ವಾಡಿ ಹೆಗ್ಗರ್ ಬೈಲುವಿನ ಚಿಕ್ಕು ಅಮ್ಮ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ಮಾಡಿ ತಲ್ಲೂರು ಗ್ರಾಮದ ಮಂಜುನಾಥ್(31), ಅನಗಳ್ಳಿ ಗ್ರಾಮದ ಆದಿತ್ಯ (25) ಎಂಬ ಇಬ್ಬರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 900 ರೂ.ನಗದು 8000 ರೂ. ಮೌಲ್ಯದ 13 ಹುಂಜ ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ದಾಳಿ ವೇಳೆ ಸ್ಥಳದಿಂದ ಕೆಲವರು ಪರಾರಿಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.