ಡೈಲಿ ವಾರ್ತೆ:25 ಫೆಬ್ರವರಿ 2023
ವರದಿ: ವಿದ್ಯಾಧರ ಮೊರಬಾ
ಸಮಾಜದ ಪರಿವರ್ತನೆಗೆ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ : ನ್ಯಾಯಾಧೀಶ ಮನೋಹರ ಎಂ.
ಅಂಕೋಲಾ : ನಮ್ಮ ಸಂವಿಧಾನ ಪ್ರತಿ ಪ್ರಜೆಗಳಿಗೆ ಸಮಾನ ಹಕ್ಕನ್ನು ನೀಡಿದ್ದು, ಭಾರತೀಯ ಪ್ರಜೆಯಾಗಿ ನಮಗಿರುವ ಸಕಲ ಸೌಲತ್ತುನ್ನು ಬಳಸಿಕೊಂಡು ಉತ್ತಮ ಸಮಾಜ ನಿರ್ಮಿಸುವ ಹೊಣೆ ಹೊರಬೇಕಾಗಿದೆ.
ಯಾವುದೇ ಜಾಡ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಸಮಾಜದ
ಪರಿವರ್ತನೆಗೆ ನಮ್ಮನ್ನು ತೊಡಗಿಸಿ ಕೊಳ್ಳಬೇಕಾಗಿದೆ ಎಂದು ಇಲ್ಲಿಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಹೇಳಿದರು.
ಇಲ್ಲಿಯ ಕೆ.ಎಲ್.ಇ.ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ, ಗೃಹರಕ್ಷಕ ದಳ ದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ ಕಾನೂನು ನೆರವು-ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿ, ನಮ್ಮಿಂದ ಸಾಮಾಜಿಕ ಸಮಾನತೆ ತರುವಲ್ಲಿ ಪ್ರಯತ್ನಗಳು ಆಗಬೇಕು ಎಂದರು.
ಹೆಚ್ಚುವರಿ ನ್ಯಾಯಾಧೀಶೆ ಅರ್ಪಿತ ಬೆಲ್ಲದ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗಳ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ತೆಗೆದುಹಾಕಿ ಅವುಗಳ ಸೂಕ್ತ ಅರಿವು ರೂಪಿಸಿಕೊಳ್ಳಬೇಕು ಎಂದರು. ಸರ್ಕಾರಿ ಅಭಿಯೋಜಕಿ ಶಿಲ್ಪ ನಾಯ್ಕ, ಗೃಹರಕ್ಷಕ ದಳದ ತಾಲೂಕ ಆಡಳಿತ ಅಧಿಕಾರಿ, ವಕೀಲ ವಿನೋದ ಶಾನಭಾಗ, ಹಿರಿಯ ನ್ಯಾಯವಾಧಿ ಸುಭಾಶ ಆರ್.ನಾರ್ವೇಕರ, ಮತ್ತು ಪ್ರಾಚಾರ್ಯ ಡಾ. ವಿನಾಯಕ ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿ.ಈಡಿ ಕಾಲೇಜಿನ ವಿದ್ಯಾರ್ಥಿ ತೃಪ್ತಿ ನಾಯ್ಕ, ಸಂಪ್ರಿಯ, ಶಿವಾನಂದ ಗುಂಜಾಳ, ರಾಜೇಶ ನಾಯ್ಕ, ಮಣಿಕಂಠ ನಾಯ್ಕ ಪಾಲ್ಗೊಂಡರು. ಕಾವ್ಯ ಪ್ರಾರ್ಥಿ ಸಿದರು, ವಕೀಲರಾದ ಜಿ.ವಿ.
ನಾಯ್ಕ, ಉಮೇಶ ನಾಯ್ಕ ಮತ್ತು ಉಪನ್ಯಾಸಕ ಮಂಜುನಾಥ ಇಟಗಿ ನಿರ್ವಹಿಸಿದರು.
ಸನ್ಮಾನ : ಗೃಹರಕ್ಷಕ, ತುರ್ತು ಸೇವಾ ಮತ್ತು ಅಗ್ನಿಶಾಮಕ
ಆಶ್ರಯದಲ್ಲಿ ಇತ್ತೇಚಿಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಗೃಹರಕ್ಷಕ ದಳದ ಸಂದೀಪ ಗೌಡ, ಲಕ್ಷ್ಮಣ ಗೌಡ, ಉಮಾ ಗೌಡ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.