



ಡೈಲಿ ವಾರ್ತೆ:28 ಫೆಬ್ರವರಿ 2023


ಉಡುಪಿ:ಡಿಜೆ ಸೌಂಡ್ ಬಳಸಿ ಮಧ್ಯರಾತ್ರಿವರೆಗೆ ಮೆಹಂದಿ ಕಾರ್ಯಕ್ರಮ, ಪೊಲೀಸ್ ದಾಳಿ ಡಿ ಜೆ ಸೆಟ್ ವಶಕ್ಕೆ ಪಡೆದ ಪೊಲೀಸರು
ಉಡುಪಿ: ಮಧ್ಯರಾತ್ರಿವರೆಗೆ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಹಾಕಿ ನೆರೆಹೊರೆಯವರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆ ದೂರು ಬಂದ ಕಾರಣ ಪೊಲೀಸರು ದಾಳಿ ನಡೆಸಿ ಸೌಂಡ್ ಬಾಕ್ಸ್ ಸಹಿತ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಫೆಬ್ರವರಿ 26 ರಂದು ಶರತ್ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿದರೂ ರಾತ್ರಿ 1.30 ರವರೆಗೂ ಡಿಜೆ ಸೌಂಡ್ ಹಾಕಿ ಸ್ಥಳೀಯರಿಗೆ ಕಿರಿಕಿರಿ ಮಾಡುತ್ತಿದ್ದರು. ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಡಿ.ಜೆ ಸೌಂಡ್ಸ್ ಹಾಕಿದ್ದು, ಸ್ಥಳೀಯರು ದೂರು ನೀಡಿದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಡಿಜೆ ಕಂಟ್ರೋಲರ್, ಲೈಟ್ ಕಂಟ್ರೋಲರ್, ಸೌಂಡ್ ಕಂಟ್ರೋಲರ್ ಹಾಗೂ ನಾಲ್ಕು ಸೌಂಡ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.