ಡೈಲಿ ವಾರ್ತೆ:08 ಮಾರ್ಚ್ 2023

ಮಾ. 14 ರಂದು ಮೆಸ್ಕಾಂ ಕೋಟ ಉಪವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆ

ಕೋಟ:ಬ್ರಹ್ಮಾವರ ತಾಲೂಕಿನ ಕೋಟ ಉಪವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆಯು ಮಾರ್ಚ್ 14 ರಂದು
ಮಂಗಳವಾರ ಬೆಳಿಗ್ಗೆ 10:30ಕ್ಕೆ ಮೆಸ್ಕಾಂ ಕೋಟ ಉಪವಿಭಾಗ ಕಛೇರಿಯಲ್ಲಿ ಉಪವಿಭಾಗದ ವ್ಯಾಪ್ತಿಯ ವಿದ್ಯುತ್‌ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.

ಸದ್ರಿ ಸಭೆಗೆ ಕಂಪನಿಯ ಮೇಲಾಧಿಕಾರಿಗಳು ಭಾಗವಹಿಸಲಿದ್ದು, ಎಲ್ಲಾ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.