ಡೈಲಿ ವಾರ್ತೆ:08 ಮಾರ್ಚ್ 2023

ಕೋಟ: ಮಾ. 12 ರಂದು ಮೊಗವೀರ ಯುವ ಸಂಘಟನೆಯ ಕೋಟ ಘಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕೋಟ: ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಕೆ. ಎಂ.ಸಿ.ಆಸ್ಪತ್ರೆ ಮಣಿಪಾಲ ಇವರ ನೇತೃತ್ವದಲ್ಲಿ ಹಾಗೂ ಕೋಟ ಗ್ರಾಮ ಪಂಚಾಯತ್ ಕೋಟ, ಬಾರಿಕೆರೆ ಯುವಕ ಮಂಡಲ(ರಿ)ಕೋಟ, ಪಂಚವರ್ಣ ಯುವಕ ಮಂಡಲ ಕೋಟ, ಮಹಿಳಾ ಘಟಕ ಕೋಟ, ಅರಮ ವಿಜಯ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಕೋಟತಟ್ಟು ಪಡುಕರೆ, ಅಮೃತ ಯುವಕ ಸಂಘ ಕದ್ರಿಕಟ್ಟು ಕೋಟ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾರ್ಚ್ 12 ರಂದು ಭಾನುವಾರ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 2:00ರ ತನಕ ಕೋಟ ಗ್ರಾಮ ಪಂಚಾಯತ್ ಸಭಾಭವನ ಕೋಟದಲ್ಲಿ ಬೃಹತ್
ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟನಾ ಆಯೋಜಕರು ತಿಳಿಸಿದ್ದಾರೆ.

ಈ ರಕ್ತ ದಾನ ಶಿಬಿರದಲ್ಲಿ ಎಲ್ಲರೂ ಭಾಗವಹಿಸಿ
ರಕ್ತದಾನ ಮಾಡಿ ಜೀವಮಾನದ ಉಡುಗರೆ ನೀಡಬೇಕಾಗಿ ವಿನಂತಿ’

ಗೌರವಾಧ್ಯಕ್ಷರು /ಅಧ್ಯಕ್ಷರು /ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಮೊಗವೀರ ಯುವ ಸಂಘಟನೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ ಕೋಟ